Thursday, March 23, 2023

Latest Posts

ಮನುಷ್ಯರಿಗೂ ಕಾಡಲಿದೆ ಹಕ್ಕಿ ಜ್ವರ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ದೇಶದ ಅನೇಕ ರಾಜ್ಯಗಳಲ್ಲಿ ಸಾಕು ಕೋಳಿಗಳು ಮತ್ತು ಬಾತುಕೋಳಿಗಳಲ್ಲಿ ಹೆಚ್ಚಾಗಿ ಕಂಡುಬರುವ ಹಕ್ಕಿ ಜ್ವರವು (Bird Flu) ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಫಾರ್ಮ್​ಗಳಲ್ಲಿ ಲಕ್ಷಾಂತರ ಕೋಳಿಗಳನ್ನು ಈಗಾಗಲೇ ಸಾಮೂಹಿಕ ಹತ್ಯೆ ಮಾಡಲಾಗಿದೆ.

ಆದರೆ ಇದೀಗ ಈ ಹಕ್ಕಿ ಜ್ವರ ಪಕ್ಷಿಗಳಿಗೆ ಮಾತ್ರವಲ್ಲದೆ ಮನುಷ್ಯರಿಗೂ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

ಹಕ್ಕಿ ಜ್ವರವು ಏವಿಯನ್ ಇನ್ಫ್ಲುಯೆನ್ಸ್​ ಟೈಪ್ ಎ ವೈರಸ್‌ಗಳ ಸೋಂಕಿನಿಂದ ಬರುವಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ದೇಶೀಯ ಕೋಳಿಗಳಿಗೆ, ಇತರ ಪಕ್ಷಿ ಮತ್ತು ಸಸ್ತನಿ ಜಾತಿಗಳಲ್ಲಿ ಸೋಂಕು ಉಂಟುಮಾಡುತ್ತದೆ. ಆದರೆ, ಇತ್ತೀಚಿನ WHO ವಿಶ್ಲೇಷಣೆಯು ಈ ರೋಗವು ಮಾನವರನ್ನು ಕೂಡ ಕಾಡುವ ಸಾಧ್ಯತೆಯಿದೆ ಎಂದು ಹೇಳಿದೆ.

ಅಂತಾರಾಷ್ಟ್ರೀಯ ಏಜೆನ್ಸಿಯ ಡೈರೆಕ್ಟರ್ ಜನರಲ್, ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಬಗ್ಗೆ ಅಲರ್ಟ್ ಮಾಡಿದ್ದೂ, H5N1 25 ವರ್ಷಗಳಿಂದ ಕಾಡು ಪಕ್ಷಿಗಳು ಮತ್ತು ಕೋಳಿಗಳಲ್ಲಿ ವ್ಯಾಪಕವಾಗಿ ಹರಡಿದೆ. ಆದರೆ ಇದು ಮನುಷ್ಯರನ್ನು ಕೂಡ ಕಾಡುವ ಸಾಧ್ಯತೆಯಿದೆ ಎಂದಿದ್ದಾರೆ.

ಕೆಲವು ವಾರಗಳಲ್ಲಿ ಹಕ್ಕಿ ಜ್ವರದ ಸೋಂಕಿನ ಹಲವಾರು ಪ್ರಕರಣಗಳು ಕಂಡುಬಂದಿವೆ. ಹೀಗಾಗಿ, ಮನುಷ್ಯರು ಕೂಡ ಎಚ್ಚರಿಕೆಯಿಂದ ಇರಬೇಕು. ಜನರು ಸತ್ತ ಅಥವಾ ಅನಾರೋಗ್ಯಕ್ಕೊಳಗಾದ ಕಾಡು ಪ್ರಾಣಿಗಳನ್ನು ಮುಟ್ಟಬಾರದು. ಅವುಗಳನ್ನು ಮನೆಗೆ ತರಬಾರದು. ಈ ರೀತಿಯ ಕಾಡುಪ್ರಾಣಿಗಳು ಕಂಡುಬಂದರೆ ಸ್ಥಳೀಯ ಅಧಿಕಾರಿಗಳಿಗೆ ವರದಿ ನೀಡಬೇಕು. WHO ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಮಾನವರಲ್ಲಿ H5N1 ಸೋಂಕಿನ ಪ್ರಕರಣಗಳನ್ನು ಅಧ್ಯಯನ ಮಾಡಲು ರಾಷ್ಟ್ರೀಯ ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!