ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ 2023 ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.
ಈ ವೇಳೆ ಸುಮಾರು 250 ಕೋಟಿ ರೂ.ಗಳ ಪ್ರಸಾರ ವಲಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶಾದ್ಯಂತದಿಂದ ಚೆನ್ನೈಗೆ ಬಂದಿರುವ ಎಲ್ಲಾ ಕ್ರೀಡಾಪಟುಗಳು ಮತ್ತು ಕ್ರೀಡಾ ಪ್ರೇಮಿಗಳಿಗೆ ನನ್ನ ಶುಭಾಶಯಗಳನ್ನ ಕೋರುತ್ತೇನೆ. ಒಟ್ಟಾಗಿ, ನೀವು ‘ಏಕ್ ಭಾರತ್ ಶ್ರೇಷ್ಠ ಭಾರತ್’ನ ನಿಜವಾದ ಸ್ಫೂರ್ತಿಯನ್ನ ಪ್ರದರ್ಶಿಸುತ್ತಿದ್ದೀರಿ. ತಮಿಳುನಾಡಿನ ಬೆಚ್ಚಗಿನ ಜನರು, ಸುಂದರವಾದ ತಮಿಳು ಭಾಷೆ, ಸಂಸ್ಕೃತಿ ಮತ್ತು ಪಾಕಪದ್ಧತಿ ಖಂಡಿತವಾಗಿಯೂ ನಿಮಗೆ ಮನೆಯಲ್ಲಿರುವಂತೆ ಮಾಡುತ್ತದೆ ಎಂದರು.