ಪ್ರಧಾನಿ ಮೋದಿ ಹಿಂದು ಅಲ್ಲ: ನಾಲಿಗೆ ಹರಿಬಿಟ್ಟ ಲಾಲೂ ಪ್ರಸಾದ್ ಯಾದವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಟೀಕಿಸಲು ತಾಯಿ ಹೀರಾಬೆನ್ ನಿಧನ ಬಳಸಿಕೊಂಡ ಲಾಲೂ ಪ್ರಸಾದ್ ಯಾದವ್
ಪ್ರಧಾನಿ ನರೇಂದ್ರ ಮೋದಿ ಹಿಂದು ಅಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

ತಾಯಿ ಹೀರಾಬೆನ್ ನಿಧನರಾದಾಗ ಪ್ರಧಾನಿ ಮೋದಿ ಕೇಶ ಮುಂಡನ ಮಾಡಿಸಿಲ್ಲ. ಹೀಗಾಗಿ ಮೋದಿ ಹಿಂದು ಅಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದು, ಹೊಸ ವಿವಾದ ಎಬ್ಬಿಸಿದ್ದಾರೆ.

ಇಂಡಿಯಾ ಮೈತ್ರಿ ಕೂಟ ಪಕ್ಷಗಳ ಬೃಹತ್ ಸಮಾವೇಶ ಪಾಟ್ನಾದ ಗಾಂಧಿ ಮೈದಾನದಲ್ಲಿಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಲಾಲು ಪ್ರಸಾದ್ ಯಾದವ್, ಮೋದಿ ಹಿಂದು ಆಗಿದ್ದರೆ, ಅವರ ತಾಯಿ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ ಯಾಕೆ? ಎಂದು ಲಾಲು ಪ್ರಸಾದ್ ಯಾದವ್ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಪರಿವಾರವಾದ, ಕುಟುಂಬ ರಾಜಕಾರಣವನ್ನು ಟೀಕಿಸುತ್ತಿದ್ದಾರೆ. ಇದಕ್ಕೆ ಕಾರಣ ಮೋದಿಗೆ ಕುಟುಂಬವಿಲ್ಲ . ಅದಕ್ಕೆ ಹೀಗೆ ಮಾಡುತ್ತಿದ್ದಾರೆ. ಮೋದಿಗೆ ಯಾಕೆ ಮಕ್ಕಳಿಲ್ಲ, ಮೋದಿ ಹಿಂದುವೇ ಅಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ. ಲಾಲೂ ಪ್ರಸಾದ್ ಯಾದವ್ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!