LIC ಬಿಮಾ ಸಖಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಾಣಿಪತ್‌’ ನಲ್ಲಿ ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದರು.

ಮಹಿಳೆಯರನ್ನ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಮಹಿಳೆಯರಿಗೆ ಎಲ್‌ಐಸಿ ಏಜೆಂಟ್ ಆಗಲು ತರಬೇತಿ ನೀಡಲಾಗುವುದು. ಈ ಅವಧಿಯಲ್ಲಿ ಪ್ರತಿ ತಿಂಗಳು 7 ಸಾವಿರದಿಂದ 5 ಸಾವಿರ ರೂಪಾಯಿ ನೀಡಲಾಗುವುದು. ಇದಲ್ಲದೇ ಪಾಲಿಸಿ ಪಡೆದ ಮೇಲೆ ಕಮಿಷನ್ ಕೂಡ ನೀಡಲಾಗುವುದು.

ಯಾರು ಅರ್ಜಿ ಸಲ್ಲಿಸಬಹುದು.?
10ನೇ ತರಗತಿ ಉತ್ತೀರ್ಣರಾಗಿರುವ ಯಾವುದೇ ಮಹಿಳೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ವಯಸ್ಸಿನ ಮಿತಿಯನ್ನೂ ಇಡಲಾಗಿದೆ. 18 ವರ್ಷದಿಂದ 70 ವರ್ಷದೊಳಗಿನ ಯಾವುದೇ ಮಹಿಳೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು, ನೀವು ನಿಮ್ಮ ಹತ್ತಿರದ ಶಾಖೆಗೆ ಹೋಗಿ ಮಾಹಿತಿಯನ್ನು ಪಡೆಯಬಹುದು. ನೀವು ಅಧಿಕೃತ ವೆಬ್‌ಸೈಟ್‌’ಗೆ ಭೇಟಿ ನೀಡುವ ಮೂಲಕವೂ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಮೊದಲು, ನೀವು ವಯಸ್ಸಿನ ಪುರಾವೆ, ವಿಳಾಸ ಪುರಾವೆ ಮತ್ತು 10 ನೇ ಪಾಸ್ ಪ್ರಮಾಣಪತ್ರದ ಸ್ವಯಂ-ದೃಢೀಕರಿಸಿದ ಪ್ರತಿಯನ್ನ ಲಗತ್ತಿಸಬೇಕು.

ಸಂಬಳ ಎಷ್ಟು?
ಈ ಯೋಜನೆಯಡಿ, ಮಹಿಳೆಯರಿಗೆ ಮೂರು ವರ್ಷಗಳ ಕಾಲ ಏಜೆಂಟ್ ಆಗಲು ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರಿಗೆ ಸ್ವಲ್ಪ ಸ್ಟೈಫಂಡ್ ಅಂದರೆ ಸಂಬಳವನ್ನೂ ನೀಡಲಾಗುವುದು.
* ಮೊದಲ ವರ್ಷ ಪ್ರತಿ ತಿಂಗಳು 7 ಸಾವಿರ ರೂಪಾಯಿ.
* ಎರಡನೇ ವರ್ಷದಲ್ಲಿ ಪ್ರತಿ ತಿಂಗಳು 6 ಸಾವಿರ ರೂಪಾಯಿ.
* ಮೂರನೇ ವರ್ಷದಲ್ಲಿ, ನೀವು ಪ್ರತಿ ತಿಂಗಳು 5,000 ರೂಪಾಯಿ.

ಕಮಿಷನ್ ಕೂಡ ಸಿಗುತ್ತದೆ
ವೇತನದ ಹೊರತಾಗಿ, ತರಬೇತಿ ಸಮಯದಲ್ಲಿ ಮಹಿಳೆಯರಿಗೆ ಕಮಿಷನ್ ಕೂಡ ಸಿಗುತ್ತದೆ. ಎಲ್ಐಸಿ ಪಾಲಿಸಿ ಪಡೆದ ಮೇಲೆ ಈ ಕಮಿಷನ್ ನೀಡಲಾಗುವುದು. ತರಬೇತಿಯ ಸಮಯದಲ್ಲಿ, ಮಹಿಳೆಯರು ಪಾಲಿಸಿಯನ್ನು ಪಡೆಯಲು ಕೆಲವು ಗುರಿಗಳನ್ನು ಪಡೆಯಬಹುದು. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಗುರಿ ಮುಟ್ಟುವ ಮಹಿಳೆಯರಿಗೆ ಸಂಬಳ ಮತ್ತು ಕಮಿಷನ್ ಹೊರತಾಗಿ ಬೋನಸ್ ಕೂಡ ಸಿಗುತ್ತದೆ.

ಮೂರು ವರ್ಷಗಳ ತರಬೇತಿಯನ್ನ ಪೂರ್ಣಗೊಳಿಸಿದ ನಂತರ, ಮಹಿಳೆಯರು ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ, ಪದವಿ ಪಡೆದ ಮಹಿಳೆಯರು ಅಂದರೆ ಬಿಮಾ ಸಖಿಯರು ಎಲ್ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿ ಪಾತ್ರದಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!