VIDEO | ರಾಮಲಲಾ ಮೂರ್ತಿಗೆ ಆರತಿ ಬೆಳಗಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀರಾಮಚಂದ್ರ ಈಗಾಗಲೇ ಅಯೋಧ್ಯೆಯ ರಾಮಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಕೋಟ್ಯಂತರ ಭಕ್ತ ಗಣ ರಾಮಲಲಾ ಮುಖಾರವಿಂದ ಕಂಡು ಭಕ್ತಿಯಿಂದ ಕೈಮುಗಿದಿದ್ದಾರೆ.

ಇಡೀ ದೇಶದಲ್ಲಿ ಹಬ್ಬದ ವಾತಾವರಣ ಉಂಟಾಗಿದ್ದು, ರಾಮಲಲಾಗೆ ಪ್ರಧಾನಿ ಮೋದಿ ಆರತಿ ಬೆಳಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪ್ರತೀ ವಿಧಿವಿಧಾನದಲ್ಲಿಯೂ ಪ್ರಧಾನಿ ಮೋದಿ ಪಾಲ್ಗೊಂಡಿದ್ದು, ಪ್ರಾಣಪ್ರತಿಷ್ಠೆ ವೇಳೆ ಗರ್ಭಗುಡಿಯಲ್ಲಿ ನಿಂತು ರಾಮಲಲಾ ದರುಶನ ಪಡೆದಿದ್ದಾರೆ. ಇದೀಗ ದೇಗುಲದಲ್ಲಿ ನೆಲೆಸಿರುವ ರಾಮಲಲಾ ಮೂರ್ತಿಗೆ ವಿಶೇಷ ಆರತಿ ಬೆಳಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!