Tuesday, March 28, 2023

Latest Posts

ಕೇಸರಿಯಾ ಹಾಡಿಗೆ ತಲೆದೂಗಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅಭಿನಯದ ಬ್ರಹ್ಮಾಸ್ತ್ರ ಚಿತ್ರದ ಕೇಸರಿಯಾ ಹಾಡು ಈಗಾಗಲೇ ಎಲ್ಲೆಡೆ ಸಾಕಷ್ಟು ಪ್ರಸಿದ್ಧವಾಗಿದೆ.

ಈ ಹಾಡು ಬಂದು 6 ತಿಂಗಳು ಕಳೆದಿದ್ದು, ಇದೀಗ ಈ ಹಾಡು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಅದಕ್ಕೆ ಕಾರಣ, ಈ ಗಾಯಕ.

ಮುಂಬೈ ಮೂಲದ ಗಾಯಕ ಸ್ನೇಹದೀಪ್ ಸಿಂಗ್ ಕಲ್ಸಿ ಅವರ ವಿಡಿಯೋ ಒಂದು ವೈರಲ್​ ಆಗಿದ್ದು, ರಾತ್ರೋ ರಾತ್ರಿ ಅವರು ದೇಶದ ಗಮನ ಸೆಳೆಯುತ್ತಿದ್ದಾರೆ.

ಅವರು ಕೇಸರಿಯಾ ಹಾಡಿಗೆ ದನಿಯಾಗಿ ಅದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಲಕ್ಷಾಂತರ ಮಂದಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಹಾಡಿಗೆ ಎಲ್ಲರೂ ತಲೆದೂಗುತ್ತಿದ್ದು, ಇದೀಗ ಖುದ್ದು ಪ್ರಧಾನಿಯವರೇ ಅಚ್ಚರಿಯ ಜೊತೆಗೆ ಶ್ಲಾಘನೆಯನ್ನೂ ವ್ಯಕ್ತಪಡಿಸಿದ್ದಾರೆ.

ಇವರು ಹಾಡಿರುವ ಹಾಡಿರುವುದರಲ್ಲಿ ವಿಶೇಷ ಇದ್ದು, ಗಾಯಕ ಸ್ನೇಹದೀಪ್ ಸಿಂಗ್ ಕಲ್ಸಿ ಅವರು ಈ ಹಾಡನ್ನು ಐದು ಭಾಷೆಗಳಲ್ಲಿ ಹಾಡಿದ್ದಾರೆ. ಹಿನ್ನೆಲೆ ಸಂಗೀತದೊಂದಿಗೆ ಈ ಹಾಡನ್ನು ಪೂರ್ತಿಯಾಗಿ ಐದು ಭಾಷೆಗಳಲ್ಲಿ ಅದ್ಭುತ ಕಂಠಸಿರಿಯಿಂದ ಹಾಡಿದ್ದಾರೆ.

ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಹಾಡಿದ್ದಾರೆ. ಸಂಪೂರ್ಣ ಹಾಡನ್ನು ಎಲ್ಲಾ ಭಾಷೆಗಳಲ್ಲಿ ಹಾಡಲಿಲ್ಲ. ಬದಲಿಗೆ ಹಾಡನ್ನು ಹಾಡುವಾಗ ಬೇರೆ ಬೇರೆ ಭಾಷೆಗಳನ್ನು ಬಳಸಿ ಮೂಲ ಗಾಯನಕ್ಕೆ ಎಲ್ಲಿಯೂ ಚ್ಯುತಿಯಾಗದಂತೆ ಹಾಡಿರುವುದು ನಿಜಕ್ಕೂ ಶ್ಲಾಘನಾರ್ಹ ಕಾರ್ಯವಾಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
ಪ್ರಧಾನಿ ಮೋದಿಯವರೂ ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಅವರು ಅದನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಪ್ರತಿಭಾವಂತ @SnehdeepSK ಹಾಡಿರುವ ಈ ಅದ್ಭುತ ಹಾಡನ್ನು ಕೇಳಿ. ಇದು ಮಧುರ, ಭವ್ಯವಾದ ಏಕ್ ಭಾರತ್ ಶ್ರೇಷ್ಠ ಭಾರತದ ಆತ್ಮದ ಉತ್ತಮ ಅಭಿವ್ಯಕ್ತಿಯಾಗಿದೆ’ ಎಂದಿದ್ದಾರೆ.

ಸಾಂಸ್ಕೃತಿಕ ವೈವಿಧ್ಯತೆ ಮತ್ತು ರಾಷ್ಟ್ರೀಯ ಏಕತೆಗೆ ಗೌರವವನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರವು ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಅಭಿಯಾನ ಮತ್ತು ಘೋಷಣೆಯನ್ನು ಸಹ ರಚಿಸಿದೆ. ಅದನ್ನೇ ಉಲ್ಲೇಖಿಸಿರುವ ಪ್ರಧಾನಿಯವರು ಹಾಡಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸ್ನೇಹದೀಪ್ ಸಿಂಗ್ ಕೂಡ ಪ್ರಧಾನಿಯವರ ಶ್ಲಾಘನೆಗೆ ಮರು ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ‘ಮೆಚ್ಚುಗೆಗೆ ತುಂಬಾ ಧನ್ಯವಾದಗಳು, ಸರ್. ಇದು ಬಹಳ ಮುಖ್ಯ. ಅದು ನಿಮ್ಮನ್ನು ತಲುಪಿದೆ ಮತ್ತು ನೀವು ಅದನ್ನು ಆನಂದಿಸಿದ್ದೀರಿ ಎಂದು ಖುಷಿಯಾಗಿದೆ’ ಎಂದಿದ್ದಾರೆ.

ಒಂದು ನಿಮಿಷ ಎಂಟು ಸೆಕೆಂಡುಗಳ ಈ ಕ್ಲಿಪ್‌ನಲ್ಲಿ ಸ್ನೇಹದೀಪ್ ಸಿಂಗ್ ಅವರು 5 ಭಾಷೆಗಳಲ್ಲಿ ಅಂದರೆ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಒಂದೇ ಸಮಯದಲ್ಲಿ ಕೇಸರಿಯಾ ಹಾಡನ್ನು ಹಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!