ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂ ಪುಷ್ಕರ್‌ನಲ್ಲಿರುವ ಬ್ರಹ್ಮ ದೇವಾಲಯದಲ್ಲಿ (Brahma temple )ಪ್ರಾರ್ಥನೆ ಸಲ್ಲಿಸಿದ್ದಾರೆ.
ಪುಷ್ಕರ್ ಬಳಿಕ ಅಜ್ಮೇರ್‌ಗೆ ತೆರಳಿ ಅಲ್ಲಿ ಮೋದಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಬ್ರಹ್ಮ ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.
ಇನ್ನು ಪ್ರಧಾನಿ ಮೋದಿಯವರು ಬಿಜೆಪಿಯ ತಿಂಗಳ ಅವಧಿಯ ಪ್ಯಾನ್-ಇಂಡಿಯಾ ಪ್ರಚಾರ ಕಾರ್ಯಕ್ರಮ, ‘ಮಹಾ ಜನಸಂಪರ್ಕ್’ ಗೆ ಇಲ್ಲಿ ಚಾಲನೆ ನೀಡಲಿದ್ದಾರೆ.
ಇದರ ಭಾಗವಾಗಿ 51 ಕ್ಕೂ ಹೆಚ್ಚು ಬೃಹತ್ ರ್ಯಾಲಿಗಳು, 500 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳು ಮತ್ತು 500 ಕ್ಕೂ ಹೆಚ್ಚು ಲೋಕಸಭೆ ಮತ್ತು 4000 ವಿಧಾನಸಭಾ ಕ್ಷೇತ್ರಗಳಲ್ಲಿ 600 ಕ್ಕೂ ಹೆಚ್ಚು ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುವುದು. 5 ಲಕ್ಷಕ್ಕೂ ಹೆಚ್ಚು ಪ್ರತಿಷ್ಠಿತ ಕುಟುಂಬಗಳನ್ನು ಸಂಪರ್ಕಿಸಲಾಗುವುದು.ಎಲ್ಲಾ 543 ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳುವ ಗುರಿಯನ್ನು ಈ ಪ್ರಚಾರ ಅಭಿಯಾನ ಹೊಂದಿದೆ. ಮೇ 31 ರಿಂದ ಜೂನ್ 30ರವರೆಗೆ ಮಹಾ ಜನ ಸಂಪರ್ಕ ಅಭಿಯಾನದಡಿ ದೇಶಾದ್ಯಂತ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕೇಂದ್ರದಲ್ಲಿ ಪಕ್ಷದ 9 ವರ್ಷಗಳ ಆಡಳಿತದಲ್ಲಿನ ಸಾಧನೆಗಳ ಸಂದೇಶವನ್ನು ರವಾನಿಸಲು ಎಲ್ಲಾ ಲೋಕಸಭಾ ಸ್ಥಾನಗಳನ್ನು ಒಳಗೊಂಡಿರುವ 144 ಕ್ಲಸ್ಟರ್ಗಳನ್ನು ಸ್ಥಾಪನೆ ಮಾಡಲಾಗುತ್ತದೆ.