ಸ್ವಾತಂತ್ರ್ಯ ದಿನ ಘೋಷಿಸಿದ ಯೋಜನೆಗಳ ಪ್ರಗತಿ ಪರಿಶೀಲಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸ್ವಾತಂತ್ರ್ಯ ದಿನಾಚರಣೆಯ (Independence Day speech) ಸಂದರ್ಭ ಮಾಡಿದ ಘೋಷಣೆಗಳನ್ನು ಆಧರಿಸಿದ ಯೋಜನೆಗಳ ಪ್ರಗತಿಯ ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಾಡಿದ್ದಾರೆ.

ಈ ವೇಳೆ ಮಹಿಳೆಯರ ಕಲ್ಯಾಣಕ್ಕಾಗಿ ಯೋಜನೆಗಳ ಬಗ್ಗೆ ಇಚರ್ಚೆ ನಡೆದಿದೆ. 2 ಕೋಟಿ ‘ಲಖ್‌ಪತ್ ದೀದಿ’ಗಳನ್ನು ಮಾಡುವುದರಿಂದ ಹಿಡಿದು 15,000 ಮಹಿಳಾ ಸ್ವಸಹಾಯ ಸಂಘಗಳನ್ನು ಡ್ರೋನ್‌ಗಳಿಂದ ಸಬಲೀಕರಣಗೊಳಿಸುವವರೆಗಿನ ಯೋಜನೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಈ ಗುರಿಯನ್ನು ಸಾಧಿಸಲು ಯೋಜಿಸಲಾದ ವಿವಿಧ ಜೀವನೋಪಾಯಗಳಬಗ್ಗೆಯೂ ಪ್ರಧಾನಮಂತ್ರಿಯವರು ಪರಿಶೀಲನೆ ನಡೆಸಿದರು.

ಅದೇ ರೀತಿ ಜನೌಷಧಿ ಮಳಿಗೆಗಳ ವ್ಯಾಪ್ತಿಯನ್ನು 10,000 ರಿಂದ 25,000 ಕ್ಕೆ ತ್ವರಿತವಾಗಿ ವಿಸ್ತರಿಸುವ ಯೋಜನೆಗಳು ಚರ್ಚೆ ನಡೆದಿದೆ .ಈ ವಿಸ್ತರಣೆಯ ಅನುಷ್ಠಾನ ತಂತ್ರವನ್ನು ಅವರು ಪರಿಶೀಲಿಸಿದ್ದಾರೆ.

ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಕೃಷಿ ಮತ್ತು ಸಂಬಂಧಿತ ಉದ್ದೇಶಗಳಿಗಾಗಿ 15,000 ಮಹಿಳಾ ಸ್ವಸಹಾಯ ಗುಂಪುಗಳನ್ನು (ಎಸ್‌ಎಚ್‌ಜಿ) ಡ್ರೋನ್‌ಗಳೊಂದಿಗೆ ಸಜ್ಜುಗೊಳಿಸುವ ಬಗ್ಗೆ ಮಾತನಾಡಿದ್ದರು.
ಕೈಗೆಟುಕುವ ಔಷಧಿಗಳ ವ್ಯಾಪ್ತಿಯನ್ನು ಹೆಚ್ಚಿಸಲು ಭಾರತದಲ್ಲಿ ಜನ್ ಔಷಧಿ ಮಳಿಗೆಗಳ ಸಂಖ್ಯೆಯನ್ನು ಪ್ರಸ್ತುತ 10,000 ರಿಂದ 25,000 ಕ್ಕೆ ಏರಿಕೆ ಬಗ್ಗೆಯೂ ಪ್ರಧಾನಿ ಮಾತನಾಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!