VIRAL VIDEO | ಕನ್ನಡದ ಹಾಡನ್ನು ಪಿಯಾನೋದಲ್ಲಿ ನುಡಿಸಿದ ಪುಟಾಣಿ ಪ್ರತಿಭೆಗೆ ಮನಸೋತ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಲ್ಲವಗಳ ಪಲ್ಲವದಲಿ ಗರಿಗೆದರಿದೆ ಗೀತ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತ..

ಹಾಡು ಕೇಳುತ್ತಿದ್ದಂತೆಯೇ ತಲೆದೂಗುವ ಮನಸಾಗುತ್ತದೆ ಅಲ್ವಾ? ಈ ಸುಂದರವಾದ ಕನ್ನಡ ಹಾಡನ್ನು ತಾಯಿ ಒಂದೊಂದೇ ಸಾಲು ಹಾಡುತ್ತಾ ಇದ್ದಂತೆ, ಮಗಳು ಪಿಯಾನೋ ನುಡಿಸಿದ್ದಾಳೆ. ಇಷ್ಟು ಪುಟಾಣಿ ಕಂದ ಇಷ್ಟು ಚೆನ್ನಾಗಿ ಪಿಯಾನೋ ನುಡಿಸಿದ್ದನ್ನು ನೋಡಿ ಮನಸೋಲದವರಿಲ್ಲ.

ಇದೇ ಸಾಲಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸೇರಿದ್ದಾರೆ. ಮಗುವಿನ ಪಿಯಾನೋ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪ್ರಧಾನಿ ಮೋದಿ ಕಣ್ಣಿಗೆ ಬಿದ್ದಿದೆ. ವಿಡಿಯೋ ನೋಡಿ ಮನಸೋತ ಪ್ರಧಾನಿ ಮಗುವಿಗೆ ಮನಸಾರೆ ಹರಸಿದ್ದಾರೆ.

ಈ ಪುಟಾಣಿ ಹೆಸರು ಶಾಲ್ಮಲಿ, ಈ ವಿಡಿಯೋ ನೋಡಿದವರ ಮೊಗದಲ್ಲಿ ನಗು ಅರಳದೇ ಇರುವುದು ಅಸಾಧ್ಯ, ಸಣ್ಣ ವಯಸ್ಸಿನಲ್ಲೇ ಎಂಥಾ ಪ್ರತಿಭೆ, ಎಂಥಾ ಕ್ರಿಯಾಶೀಲತೆ, ಆಲ್ ದಿ ಬೆಸ್ಟ್ ಶಾಲ್ಮಲೀ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!