ಇಂದು ಅಯೋಧ್ಯೆಯಲ್ಲಿ ಬೆಳಗಲಿವೆ 18 ಲಕ್ಷ ಮಣ್ಣಿನ ದೀಪ: ಪ್ರಧಾನಿ ಮೋದಿ ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಉತ್ತರ ಪ್ರದೇಶd ಅಯೋಧ್ಯೆಯಲ್ಲಿ ಪ್ರತಿ ವರ್ಷ ನಡೆಯುವಂತೆ, ದೀಪಾವಳಿಗೂ ಮುನ್ನಾ ದಿನ ನಡೆಯುವ ದೀಪೋತ್ಸವಕ್ಕೆ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿವೆ. 18 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆ ಸೃಷ್ಟಿಸಲು ಯುಪಿ ಸರ್ಕಾರ ಸಿದ್ಧವಾಗಿದೆ. ಇಂದು ಅದ್ಧೂರಿ ದೀಪೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ 3ಡಿ ಹೋಲೋ ಗ್ರಾಫಿಕ್ ಪ್ರೊಜೆಕ್ಷನ್ ಮ್ಯಾಪಿಂಗ್ ಶೋ ಹಾಗೂ ಮೈದಾನದಲ್ಲಿ ಮ್ಯೂಸಿಕಲ್ ಲೇಸರ್ ಶೋವನ್ನೂ ಮೋದಿ ವೀಕ್ಷಿಸಲಿದ್ದಾರೆ ಎಂದು ಪ್ರಧಾನ ಕಚೇರಿ ತಿಳಿಸಿದೆ.

ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಈ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವರ್ಷದ ದೀಪೋತ್ಸವವು 6ನೆಯದು. ಈ ದೀಪೋತ್ಸವದ ಅಂಗವಾಗಿ ಒಟ್ಟು 18 ಲಕ್ಷ ಮಣ್ಣಿನ ದೀಪಗಳು ಬೆಳಗಲಿವೆ. 22 ಸಾವಿರ ಸ್ವಯಂಸೇವಕರು 15 ಲಕ್ಷಕ್ಕೂ ಹೆಚ್ಚು ಮಣ್ಣಿನ ಮಡಕೆಗಳನ್ನು ಬೆಳಗಿಸಲಿದ್ದಾರೆ. ಸ್ವಯಂಸೇವಕರು ಒಂದು ಚೌಕದಲ್ಲಿ 256 ಮಣ್ಣಿನ ದೀಪಗಳನ್ನು ಅಳವಡಿಸುತ್ತಾರೆ. ಎರಡು ಚೌಕಗಳ ನಡುವೆ ಸುಮಾರು ಎರಡರಿಂದ ಮೂರು ಅಡಿ ಅಂತರ ಇರಲಿದೆ ಎಂದು ದೀಪೋತ್ಸವ ಸಂಘಟಕರು ತಿಳಿಸಿದ್ದಾರೆ. ಉಳಿದವುಗಳನ್ನು ಅಯೋಧ್ಯೆಯ ಮುಖ್ಯ ಚೌಕಗಳು ಮತ್ತು ಸ್ಥಳಗಳಲ್ಲಿ ಇರಿಸಲಾಗುವುದು.

ಇದೇ ವೇಳೆ ಸರಯೂ ನದಿ ದಡದಲ್ಲಿ ಆರತಿ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಲಿದೆ. ಪ್ರಧಾನಿ ಮೋದಿ ಸಂಜೆ 6.30ಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಬೇಕಾಗಿರುವ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿವೆ. ಅದೇ ರೀತಿ ದೊಡ್ಡ ಮಟ್ಟದಲ್ಲಿ ಪಟಾಕಿ ಸಿಡಿಸುವುದರೊಂದಿಗೆ ಮ್ಯೂಸಿಕಲ್ ಲೇಸರ್ ಶೋ ಆಯೋಜಿಸಲಾಗುವುದು. ರಾಮಲೀಲಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಷ್ಯಾ ಸೇರಿದಂತೆ ಇತರ ದೇಶಗಳು ಮತ್ತು ರಾಜ್ಯಗಳ ಸಾಂಸ್ಕೃತಿಕ ತಂಡಗಳು ಸಹ ಪ್ರದರ್ಶನ ನೀಡುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!