ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ಇಂದು ಜಾಗತಿಕ ಹೂಡಿಕೆದಾರರ ಶೃಂಗಸಭೆ ನಡೆಯಲಿದೆ. ಶೃಂಗಸಭೆಯನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.
ಎರಡು ದಿನಗಳು ಡೆಹ್ರಾಡೂನ್ನ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಸಮ್ಮೇಳನ ನಡೆಯಲಿದೆ. ಶಾಂತಿಯಿಂದ ಸಮೃದ್ಧಿಯೆಡೆಗೆ ಎನ್ನುವುದು ಶೃಂಗಸಭೆಯ ಮುಖ್ಯ ವಿಷಯವಾಗಿದೆ.
ಪ್ರಪಂಚದಾದ್ಯಂತ ಹೂಡಿಕೆದಾರರು ಸಭೆಗೆ ಆಗಮಿಸಲಿದ್ದಾರೆ. ಕೇಂದ್ರ ಸಚಿವರು, ವಿವಿಧ ದೇಶದ ರಾಯಭಾರಿಗಳು, ಪ್ರಮುಖ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತವನ್ನು ಕೋರಲು ಉತ್ತರಾಖಂಡ ತಯಾರಾಗಿದೆ. 1,000ಕ್ಕೂ ಹೆಚ್ಚು ಜಾನಪದ ಕಲಾವಿದರು ಸುಮಾರು ಒಂದು ಕಿಲೋಮೀಟರ್ವರೆಗೆ ಮಾನವಿ ಸರಪಳಿ ನಿರ್ಮಿಸಿ ಸಾಂಸ್ಕೃತಿಕ ನೃತ್ಯಗಳನ್ನು ಮಾಡಲಿದ್ದಾರೆ.