ಪ್ರಧಾನಿ ಮೋದಿಯಿಂದ ನಾಳೆ ‘ಯಶೋಭೂಮಿ’ಯ ಉದ್ಘಾಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಜನ್ಮದಿನ. ಈ ಕ್ಷಣ ದ್ವಾರಕಾದಲ್ಲಿ ನಿರ್ಮಿಸಿರುವ ‘ಯಶೋಭೂಮಿ’ (Yashobhoomi) ಹೆಸರಿನ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್​ ಸೆಂಟರ್​​ (ಐಐಸಿಸಿ)ಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ಯಶೋಭೂಮಿಯು ವಿಶ್ವದ ಅತಿದೊಡ್ಡ ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಾಲಯಗಳನ್ನು ನಡೆಸಬಹುದಾದ ಸೌಲಭ್ಯಗಳನ್ನು ಒಳಗೊಂಡಿದೆ. ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್​ ಸೆಂಟರ್ ಎಂದೂ ಕರೆಯಲ್ಪಡುವ ಯಶೋಭೂಮಿಯು ಒಟ್ಟು 8.9 ಲಕ್ಷ ಚದರ ಮೀಟರ್‌ ಪ್ರದೇಶ ಹೊಂದಿದೆ.

ಸುಮಾರು 5.400 ಕೋಟಿ ರೂ. ವೆಚ್ಚದಲ್ಲಿ ಯಶೋಭೂಮಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಅತ್ಯಂತ ಭವ್ಯವಾದ ಕನ್ವೆನ್ಷನ್ ಸೆಂಟರ್, ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ.73 ಸಾವಿರ ಚದರ ಮೀಟರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ನಿರ್ಮಿಸಲಾದ ಕನ್ವೆನ್ಶನ್ ಸೆಂಟರ್, ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು 11 ಸಾವಿರ ಪ್ರತಿನಿಧಿಗಳು ಒಟ್ಟಿಗೆ ಸೇರಬಹುದಾದ 13 ಸಭೆ ಕೊಠಡಿಗಳು, 15 ಕನ್ವೆನ್ಶನ್ ಕೊಠಡಿಗಳನ್ನು ಒಳಗೊಂಡಿದೆ.

ಸುಮಾರು 6 ಸಾವಿರ ಅತಿಥಿಗಳು ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಆಸನ ಸಾಮರ್ಥ್ಯವನ್ನು ಹೊಂದಿದೆ. ವಿಶಿಷ್ಟವಾದ ಛಾವಣಿಯನ್ನು ಹೊಂದಿರುವ ಭವ್ಯವಾದ ಬಾಲ್ ರೂಮ್ ಸುಮಾರು 2,500 ಅತಿಥಿಗಳಿಗೆ ಆತಿಥ್ಯ ವಹಿಸಬಹುದು.

ಇದರೊಂದಿಗೆ ದ್ವಾರಕ ಸೆಕ್ಟರ್‌ 21ರಿಂದ ದ್ವಾರಕಾ ಸೆಕ್ಟರ್‌ 25ರವರೆಗೆ ವಿಸ್ತರಿಸಿರುವ ದೆಹಲಿ ಏರ್‌ಪೋರ್ಟ್‌ ಮೆಟ್ರೊ ಎಕ್ಸ್‌ಪ್ರೆಸ್‌ ಮಾರ್ಗವನ್ನೂ ಅವರು ಉದ್ಘಾಟಿಸಲಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!