ನಾಳೆ ಪ್ರಧಾನಿ ಮೋದಿ ಬರ್ಥ್‌ಡೇ: 13ವರ್ಷದ ಬಾಲಕಿಯಿಂದ ʼದೊಡ್ಡʼ ಗಿಫ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆ ಪ್ರಧಾನಿ ಮೋದಿ ಜನ್ಮದಿನ, ಮೋದಿ ಜನ್ಮದಿನಕ್ಕೆ ಬಾಲಕಿಯೊಬ್ಬಳು ಬೃಹತ್‌ ಚಿತ್ರವನ್ನು ಬರೆದಿದ್ದಾಳೆ.

13ರ ಹರೆಯದ ಶಾಲಾ ವಿದ್ಯಾರ್ಥಿ ಪ್ರೀಸ್ಲಿ ಶೆಕಿನಾ  800 ಕೆಜಿ ಧಾನ್ಯ ಬಳಸಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ನಿರಂತರವಾಗಿ 12 ಗಂಟೆಗಳ ಕಾಲ ಚಿತ್ರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಪ್ರೀಸ್ಲಿ ಶೆಕಿನಾ ತನ್ನ ಹೆತ್ತವರಾದ ಪ್ರತಾಪ್ ಸೆಲ್ವಂ ಮತ್ತು ಸಂಕೀರಾಣಿ ಅವರೊಂದಿಗೆ ಚೆನ್ನೈನ ಕೊಲಪಾಕ್ಕಂ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಚೆನ್ನೈನಲ್ಲಿರುವ ವೆಲಮ್ಮಾಳ್ ಶಾಲೆಯ ಖಾಸಗಿ ಶಾಲೆಯಲ್ಲಿ 8 ನೇ ತರಗತಿಯ ವಿದ್ಯಾರ್ಥಿನಿ.

ಈಕೆ 800 ಕೆಜಿ ತೂಕದ ಧಾನ್ಯ ಬಳಸಿ 600 ಚದರ ಅಡಿ ವಿಸ್ತೀರ್ಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಭಾವಚಿತ್ರವನ್ನು ಚಿತ್ರಿಸಿದ್ದಾರೆ. 12 ಗಂಟೆಗಳ ಕಠಿಣ ಪರಿಶ್ರಮದ ನಂತರ ಈಕೆ ತನ್ನ ಚಿತ್ರವನ್ನು ಪೂರ್ಣಗೊಳಿಸಿದ್ದಾಳೆ. ಪ್ಲೀಸ್ಲಿ ಬೆಳಿಗ್ಗೆ 8.30 ಕ್ಕೆ ಪ್ರಾರಂಭಿಸಿ ಸಂಜೆ 8.30 ರವರೆಗೆ ಈ ಚಿತ್ರ ಬಿಡಿಸುವಲ್ಲಿ ನಿರತಳಾಗಿದ್ದಳು.

ಪ್ರೀಸ್ಲಿಯ ಪರಿಶ್ರಮವನ್ನು ಯುಎನ್‌ಐಸಿಒ ವರ್ಲ್ಡ್ ರೆಕಾರ್ಡ್‌ನಿಂದ ಗುರುತಿಸಲ್ಪಟ್ಟಿದ್ದು, ವಿದ್ಯಾರ್ಥಿ ಸಾಧನೆಯ ವಿಭಾಗದಲ್ಲಿ ನೋಂದಾಯಿಸಲಾಗಿದೆ.

 

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!