September 16, 2026
Wednesday, September 16, 2026
spot_img

ಇಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಗ್ರ್ಯಾಂಡ್‌ ಎಂಟ್ರಿ: ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಗೆ ಭೇಟಿ ನೀಡಲಿದ್ದು, 80 ಕೋಟಿ ರೂ.ಗೂ ಅಧಿಕ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಲಿದ್ದಾರೆ.

ದೆಹಲಿಯಿಂದ ಪ್ರಧಾನಿ ಮೋದಿ ಎಚ್‌ಎಎಲ್‌ಗೆ ಆಗಮಿಸಲಿದ್ದು, ಅಲ್ಲಿಂದ ಮಂಡ್ಯಕ್ಕೆ ಬರಲಿದ್ದಾರೆ. ತಪೋವನದ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ.

ಮೊದಲು ಮೋದಿ ಗೋರಕ್ಷನಾಥ ತಪಸ್ಸು ಮಾಡಿ ನಂತರ ಜ್ವಾಲಾಪೀಠಕ್ಕೆ ಆಗಮಿಸಲಿದ್ದಾರೆ. ನಂತರ ಕಾಲಭೈರವೇಶ್ವರಸ್ವಾಮಿ ಸನ್ನಿಧಿಗೆ ತೆರಳಲಿದ್ದಾರೆ. ಆನಂತರ ಗುರು ಭೈರವೈಕ್ಯ ಮಂದಿರದ ಉದ್ಘಾಟನೆ ಮಾಡಲಿದ್ದಾರೆ.

ಚುಂಚನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಭದ್ರತೆಗೆ 6 ಜನ ಎಸ್ಪಿ, 8 ಎಎಸ್ಪಿ, 18 ಡಿವೈಎಸ್ಪಿ, 53 ಇಸ್ಪೆಕ್ಟರ್, 175 ಸಬ್ ಇನ್ಸಪೆಕ್ಟರ್, 1,00 ಪೊಲೀಸ್ ಕಾನ್‌ಸ್ಟೆಬಲ್, 8 ಕೆಎಸ್‌ಆರ್‌ಪಿ, 16 ಡಿಆರ್ ತುಕಡಿ ನಿಯೋಜಿಸಲಾಗಿದೆ. ಒಟ್ಟು ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಕಾರ್ಯಕ್ರಮ ಆರಂಭವಾಗುವ ಒಂದೂವರೆ ತಾಸಿನ ಮುಂಚೆ ಸಾರ್ವಜನಿಕರಿಗೆ ಬರಲು ಸೂಚನೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !