ವಾರಾಣಸಿಯಲ್ಲಿ ಪ್ರಧಾನಿ ಮೋದಿ ಬೃಹತ್‌ ರೋಡ್‌ ಶೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಯಲ್ಲಿ ಬೃಹತ್‌ ರೋಡ್‌ ಶೋ (Modi Roadshow Live) ಕೈಗೊಂಡಿದ್ದಾರೆ.

ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಗೇಟ್‌ನಿಂದ ರೋಡ್‌ ಶೋ ಆರಂಭವಾಗಿದ್ದು, ಕಾಶಿ ವಿಶ್ವನಾಥ ಧಾಮದ ಗೇಟ್ ಸಂಖ್ಯೆ 4ರಲ್ಲಿ ರೋಡ್‌ ಶೋ ಮುಕ್ತಾಯಗೊಳ್ಳಲಿದೆ. ಮೋದಿ ಅವರನ್ನು ಕಣ್ತುಂಬಿಕೊಳ್ಳಲು ರಸ್ತೆಯುದ್ದಕ್ಕೂ ಸಾವಿರಾರು ಜನ ನೆರೆದಿದ್ದಾರೆ. ಮೋದಿ ಅವರಿಗೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ಕೂಡ ಸಾಥ್‌ ನೀಡಿದ್ದಾರೆ.

ವಾರಣಾಸಿ ಲೋಕಸಭಾ ಕ್ಷೇತ್ರದ ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರು ರೋಡ್‌ಶೋನ ಭಾಗವಾಗಿದ್ದಾರೆ. ಮಹಿಳೆಯರ ಸಾಂಸ್ಕೃತಿಕ ನೃತ್ಯ, ಜೈ ಶ್ರೀರಾಮ್‌ ಎಂಬ ಘೋಷಣೆಗಳು ಸಾಮಾನ್ಯ ಎಂಬಂತಾಗಿದೆ. ನರೇಂದ್ರ ಮೋದಿ ಪರವೂ ಜನ ಘೋಷಣೆಗಳನ್ನು ಮೊಳಗಿಸಿದ್ದಾರೆ.

ನಾಳೆ ಮಂಗಳವಾರ (ಮೇ 14) ಬೆಳಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಕಾಶಿಯ ಕಾಲ ಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತ’ವಾಗಿದ್ದು, ʼಆನಂದ ಯೋಗ’ದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಅವರು ರೋಡ್‌ ಶೋ ನಡೆಸಿ ಜನರ ಗಮನ ಸೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!