ವಿಶ್ವ ಕದನ ವಿರಾಮಕ್ಕೆ ಪ್ರಸ್ತಾಪಿಸಿದ ತ್ರಿಸದಸ್ಯ ಸಮಿತಿಯಲ್ಲಿ ಪ್ರಧಾನಿ ಮೋದಿ ಹೆಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುದ್ಧ ಅಥವಾ ವ್ಯಾಪಾರ ಯುದ್ಧಗಳಿಲ್ಲದೆ ಐದು ವರ್ಷಗಳ ವಿಶ್ವ ಒಪ್ಪಂದವನ್ನು ಉತ್ತೇಜಿಸಲು ಮೂರು ವ್ಯಕ್ತಿಗಳಿಂದ ಮಾಡಲ್ಪಟ್ಟ ಆಯೋಗವನ್ನು ರಚಿಸುವಂತೆ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ವಿಶ್ವಸಂಸ್ಥೆಗೆ ಲಿಖಿತ ಪ್ರಸ್ತಾವನೆಯನ್ನು ಸಲ್ಲಿಸಲು ಉದ್ದೇಶಿಸಿದ್ದಾರೆ.

ಈ ಆಯೋಗದಲ್ಲಿ ಪೋಪ್ ಫ್ರಾನ್ಸಿಸ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇರಬೇಕು ಎಂದು ಹೇಳಿದ್ದಾರೆ.

‘ನಾನು ಪ್ರಸ್ತಾವನೆಯನ್ನು ಲಿಖಿತವಾಗಿ ನೀಡಲಿದ್ದು, ಇದನ್ನು ವಿಶ್ವಸಂಸ್ಥೆಯಲ್ಲೂ ನಾನು ಪ್ರಸ್ತಾಪಿಸುತ್ತೇನೆ. ನಾನು ಇದನ್ನು ಏಕೆ ಹೆಳುತ್ತಿದ್ದೇನೆ ಎಂದರೆ, ಜಗತ್ತಿನ ಮಾಧ್ಯಮಗಳು ಈ ಕುರಿತಾಗಿ ಇನ್ನಷ್ಟು ಪ್ರಚಾರ ಮಾಡಬೇಕು ಎನ್ನುವ ಕಾರಣಕ್ಕೆ ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ. ಅವರಿಗೆ ಅಗತ್ಯವಿಲ್ಲದ ವಿಚಾರಗಳ ಬಗ್ಗೆ ಮಾಧ್ಯಮಗಳು ಎಂದಿಗೂ ಮಾತನಾಡುವುದಿಲ್ಲ’ ಎಂದು ಸಾಂಪ್ರದಾಯಿಕ ಬೆಳಗಿನ ಸುದ್ದಿಗೋಷ್ಠಿಯಲ್ಲಿ ಲೋಪಜ್‌ ಒಬ್ರಡಾರ್‌ ಹೇಳಿದ್ದಾರೆ. ಈ ಆಯೋಗದಲ್ಲಿ ಪೋಪ್‌ ಫ್ರಾನ್ಸಿಸ್‌, ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇರಬೇಕು’ ಎಂದು ಹೇಳಿದ್ದಾರೆ.

ಒಬ್ರಡಾರ್ ಪ್ರಕಾರ, ಮೂವರೂ ಒಟ್ಟಾಗಿ ಸೇರುವುದು, ಪ್ರಪಂಚದಾದ್ಯಂತ ಯುದ್ಧವನ್ನು ಕೊನೆಗೊಳಿಸಲು ಯೋಜನೆಯನ್ನು ತ್ವರಿತವಾಗಿ ಸಲ್ಲಿಸುವುದು ಮತ್ತು ಕನಿಷ್ಠ ಐದು ವರ್ಷಗಳ ಕಾಲ ಕದನ ವಿರಾಮಕ್ಕಾಗಿ ತಿಳುವಳಿಕೆಗೆ ಬರುವುದು ಗುರಿಯಾಗಿದೆ. ಯುದ್ಧದಂತಹ ಪರಿಸ್ಥಿತಿಗಳನ್ನು ಕೊನೆಗೊಳಿಸಲು ಮತ್ತು ಶಾಂತಿ ಸ್ಥಾಪನೆಗಾಗಿ ಕೆಲಸ ಮಾಡಲು ಯುಎಸ್, ಚೀನಾ ಮತ್ತು ರಷ್ಯಾದೇಶಗಳು ಪ್ರಯತ್ನಗಳನ್ನು ಮಾಡುವಂತೆ ಒತ್ತಾಯಿಸಿದ್ದಾರೆ.

ದಾಖಲೆಯ ಹಣದುಬ್ಬರ ಮತ್ತು ಪೂರೈಕೆ ಸರಪಳಿ ಸಮಸ್ಯೆಗಳಿಂದ ಬಳಲುತ್ತಿರುವ ಜಗತ್ತು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ಋಣಾತ್ಮಕವಾಗಿ ಪರಿಣಾಮ ಬೀರುತ್ತಿದೆ . ದೇಶಗಳು ತಮ್ಮ ವ್ಯಾಪಾರ ಸಂಘರ್ಷಗಳನ್ನು ನಿಲ್ಲಿಸಬೇಕು. ತಮ್ಮ ಸಂಬಂಧಿತ ಬದ್ಧತೆಗಳ ಬಗ್ಗೆ ನಿಗಾ ಇಡಲು ವಿಶ್ವಸಂಸ್ಥೆಯ ಚೌಕಟ್ಟನ್ನು ಬಳಸಬೇಕು ಎಂದು ಅವರು ಹೇಳಿದರು.

ಕದನ ವಿರಾಮದ ಸಮಯದಲ್ಲಿ, ರಾಷ್ಟ್ರಗಳು ಹಿಂದುಳಿದವರಿಗೆ ಸೇವೆ ಸಲ್ಲಿಸಲು ಮತ್ತು ಜಗತ್ತಿನಾದ್ಯಂತ ಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸಲು ಸಹಕರಿಸಬೇಕು ಎಂದು ಒಬ್ರಡಾರ್ ಮನವಿ ಮಾಡಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!