ದೇವರ ಸ್ವಂತ ನಾಡು ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ: ಅದ್ಧೂರಿ ರೋಡ್ ಶೋ ನಲ್ಲಿ ಹೂವಿನ ಸುರಿಮಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕೊಚ್ಚಿಗೆ ಆಗಮಿಸಿದ್ದಾರೆ.

ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಯುವಂ ಕಾಂಕ್ಲೇವ್, ಬಿಶಪ್ ಚರ್ಚ್‌ಗೆ ಭೇಟಿ, ವಾಟರ್ ಬೋಟ್ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ಮೋದಿ ಕೇರಳದ ಕೊಚ್ಚಿಗೆ ಆಗಮಿಸಿದ್ದಾರೆ.

ಕೇರಳ ಉಡುಗು ತೊಡುಗೆಯಲ್ಲಿ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ಸಿಕ್ಕಿತು. ಪಂಚೆ, ಬಿಳಿ ಕುರ್ತಾ ಹಾಗೂ ಶಲ್ಯ ಹಾಕಿ ಕೇರಳ ಸಾಂಪ್ರಾದಾಯಿಕ ಉಡುಗೆಯಲ್ಲಿ ಮೋದಿ ಕಾಣಿಸಿಕೊಂಡಿದ್ದಾರೆ. ಕೊಚ್ಚಿಯಲ್ಲಿ ಭಾರಿ ಭಿಗಿ ಭದ್ರತೆಯಲ್ಲಿ ಅದ್ಧೂರಿ ರೋಡ್ ಶೋ ನಡೆಸಿದರು.

ಮೋದಿ ರೋಡ್ ಶೋ ಥೇವರದಲ್ಲಿರುವ ಸೆಕ್ರೆಟ್ ಹಾರ್ಟ್ ಕಾಲೇಜು ಮೈದಾನದಲ್ಲಿ ಜನರತ್ತ ಕೈ ಬೀಸಿ ಶುಭಕೋರಿದರು. ಬಿಳಿ ಜುಬ್ಬಾ ಮತ್ತು ಧೋತಿ ಧರಿಸಿ ಆಗಮಿಸಿದ ಪ್ರಧಾನಿ ರಸ್ತೆಯಲ್ಲೇ ನಡೆದು ಜನರತ್ತ ಕೈ ಬೀಸಿದ್ದಾರೆ. ಇಕ್ಕೆಲಗಳಲ್ಲಿ ನಿಂತಿದ್ದ ಜನರು ಮೋದಿಗೆ ಹೂವಿನ ಸುರಿಮಳೆಗೈದಿದ್ದಾರೆ. ನಂತರ ಮೋದಿಯವರು ಕಾರಿನಲ್ಲಿ ಕುಳಿತು ಜನರಿಗೆ ನಮಸ್ಕರಿಸುತ್ತಾ ಸಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!