ಪ್ರಧಾನಿ ಮೋದಿ ಸಿಂಗಾಪುರ ಭೇಟಿ: ಎರಡು ದೇಶಗಳ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಬಲಪಡಿಸುವ ಕಾಲ ಸನ್ನಿಹಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಿಂಗಪುರಕ್ಕೆ ಭೇಟಿ ನೀಡಲಿದ್ದಾರೆ. ಇದು ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕಾಲ ಕೂಡಿ ಬಂದಿದೆ. ಎರಡು ದಶಕಗಳಿಂದ ನಮ್ಮ ಸಂಬಂಧ ಬಹಳಷ್ಟು ಶಕ್ತಿಯುತವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

‘ದಿ ಸ್ಟ್ರೇಟ್ಸ್‌ ಟೈಮ್ಸ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಅವರು,ಕಳೆದ ದಶಕದಲ್ಲಿ ಭಾರತ ಸಾಧಿಸಿದ ಅಭಿವೃದ್ಧಿ, ಕೋವಿಡ್‌ ಸಂಕಷ್ಟದಿಂದ ದೇಶವು ಹೊರಬಂದ ರೀತಿ, ದೇಶದಲ್ಲಿ ತ್ವರಿತ ಗತಿಯಲ್ಲಿ ನಡೆಯುತ್ತಿರುವ ಡಿಜಿಟಲ್‌ ಕ್ರಾಂತಿ, ನಮ್ಮಲ್ಲಿನ ಮೂಲಸೌಕರ್ಯ, ಉತ್ಪಾದಕ ವಲಯ ಹಾಗೂ ಯುವಜನರಲ್ಲಿನ ಹೇರಳ ಪ್ರತಿಭೆ… ಹೀಗೆ, ಸಿಂಗಪುರವು ಹಲವು ಅಂಶಗಳನ್ನು ಗಮನಿಸಬಹುದು. ಈ ಎಲ್ಲ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಕೈಜೋಡಿಸಬಹುದು’ ಎಂದರು.

ಸೆಮಿಕಂಡಕ್ಟರ್‌, ಹಸಿರು ತಾಂತ್ರಿಕತೆ, ವಿದ್ಯುತ್‌ ಚಾಲಿತ ವಾಹನಗಳು ದ್ವಿಪಕ್ಷೀಯ ಮಾತುಕತೆ ಆದ್ಯತಾ ವಿಷಯಗಳಾಗಿವೆ. ಸಂಪರ್ಕ ಹಾಗೂ ಇಂಧನ ವಿನಿಮಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!