20 ಮಿಲಿಯನ್ ಫಾಲೋವರ್ಸ್ ದಾಟಿದ ಪ್ರಧಾನಿ ಮೋದಿ ‘ಯೂಟ್ಯೂಬ್ ಚಾನೆಲ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಯೂಟ್ಯೂಬ್ ಚಾನೆಲ್ ಬಂದ ಬಳಿಕ ದಿನೇ ದಿನೇ ಫಾಲೋವರ್ಸ್ ಹೆಚ್ಚುತ್ತಿದ್ದು, ಇದೀಗ 20 ಮಿಲಿಯನ್ ಚಂದಾದಾರರನ್ನು ದಾಟಿದೆ.

ಪ್ರಧಾನಿ ಮೋದಿ ಅವರ ಯೂಟ್ಯೂಬ್ ಚಾನೆಲ್ 20 ಮಿಲಿಯನ್ (ಎರಡು ಕೋಟಿ) ಚಂದಾದಾರರನ್ನು ದಾಟಿದ್ದು, ಇಷ್ಟೊಂದು ಫಾಲೋವರ್ಸ್ ಪಡೆದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.

ಪ್ರಧಾನಿ ಮೋದಿ ತಮ್ಮ ಭಾರತೀಯ ಮತ್ತು ಜಾಗತಿಕ ಸಮಕಾಲೀನರ ಯೂಟ್ಯೂಬ್ ಚಾನೆಲ್ ಗಳನ್ನು ಮೀರಿಸಿದ್ದಾರೆ.ಪ್ರಧಾನಿ ಮೋದಿಯವರ ಚಾನೆಲ್ ಒಟ್ಟು 4.5 ಬಿಲಿಯನ್ ವೀಡಿಯೊ ವೀಕ್ಷಣೆಗಳನ್ನು ಕಲೆಕ್ಷನ್ ಮಾಡಿದೆ. ವಿಶೇಷವೆಂದರೆ, ಕಳೆದ ವರ್ಷ ಫೆಬ್ರವರಿಯಲ್ಲಿ ಪಿಎಂ ಮೋದಿಯವರ ಯೂಟ್ಯೂಬ್ ಚಾನೆಲ್ 10 ಮಿಲಿಯನ್ ಚಂದಾದಾರರ ಗಡಿಯನ್ನು ದಾಟಿತ್ತು. ಅವರ ಚಾನೆಲ್ ನ ಮೂರು ಅತ್ಯಂತ ಜನಪ್ರಿಯ ವೀಡಿಯೊಗಳು ಒಟ್ಟು 175 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿವೆ ಎಂದು ಮೂಲಗಳು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!