ಪ್ರಧಾನಿ ಮೋದಿ ಕಂಡು ಓಡೋಡಿ ಬಂದ್ರು ನೋಡಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ದಿನದ ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು,ಈ ವೇಳೆ ಅಚ್ಚರಿಗೆ ಘಟನೆ ನಡೆದಿದೆ.
ಹೌದು , ಜಿ7 ಶೃಂಗಸಭೆಯಲ್ಲಿ ಪ್ರಧಾನಿಗೆ ಬಂದಾಗ ಮೋದಿ ನೋಡಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಓಡೋಡಿ ಬಂದು ಮಾತನಾಡಿಸಿದ ಘಟನೆ ನಡೆದಿದೆ.
ಜಿ7 ಶೃಂಗಸಭೆ ಮುನ್ನ ಆಹ್ವಾನಿತ ದೇಶದ ನಾಯಕರ ಜೊತೆ ಪ್ರಧಾನಿ ಮೋದಿ ಅನೌಪಚಾರಿಕ ಮಾತುಕತೆ ನಡೆಸಿದ್ದರು. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜೊತೆ ಮಾತನಾಡುತ್ತಿದ್ದ ವೇಳೆ, ಜೋ ಬೈಡೆನ್ ಮೋದಿಯನ್ನು ಹುಡುಕುತ್ತಾ ಬಂದಿದ್ದಾರೆ.
ಮೋದಿ ಹಾಗೂ ಜಸ್ಟಿನ ಟ್ರುಡೋ ಕೈಲುಕುತ್ತಾ ಮಾತನಾಡುತ್ತಿದ್ದಂತೆ ಹಿಂಬಾಗದಿಂದ ಬಂದ ಜೋ ಬೈಡೆನ್ ಮೋದಿಯ ಹೆಗಲು ತಟ್ಟಿ ಕರೆದಿದ್ದಾರೆ. ಅತ್ತ ಜೈ ಬೈಡೆನ್ ನೋಡಿ ಮೋದಿ ಅತೀವ ಸಂತದಿಂದ ಕೈಕುಲುಕಿ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿ7 ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ. ಜೂನ್ 26 ಹಾಗೂ 27 ರಂದು ಜರ್ಮನಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿರುವ ಮೋದಿ, ಜೂನ್ 28 ಕ್ಕೆ ಯುಎಇಗೆ ಭೇಟಿ ನೀಡಲಿದ್ದಾರೆ. ಬಳಿಕ ಭಾರತಕ್ಕೆ ಹಿಂತಿರುಗಲಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!