ಹೊಸದಿಗಂತ ಡಿಜಿಟಲ್ ಡೆಸ್ಕ್:
ವರಂಗಲ್‌ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಪ್ರಧಾನಿ ಭೇಟಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಭೇಟಿಯ ಅಂಗವಾಗಿ ಒಟ್ಟು ರೂ. 6,109 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಹನ್ಮಕೊಂಡದ ಕಲಾ ಮತ್ತು ವಿಜ್ಞಾನ ಕಾಲೇಜು ಮೈದಾನದಲ್ಲಿ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ‘ವಿಜಯ ಸಂಕಲ್ಪ ಸಭೆ’ಯಲ್ಲಿ ಮೋದಿ ಭಾಗವಹಿಸಲಿದ್ದಾರೆ.
ಎಲ್ಲೆಡೆ ಬಿಗಿ ಭದ್ರತೆ
ಮೋದಿ ಭೇಟಿ ಹಿನ್ನೆಲೆಯಲ್ಲಿ ಕಲಾ ಕಾಲೇಜು ಸುತ್ತಲಿನ 20 ಕಿ.ಮೀ ದೂರದವರೆಗೂ ವಿಮಾನ ಹಾರಾಟ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಪ್ರಧಾನಿಯವರ ಭದ್ರತೆಯನ್ನು ನೋಡಿಕೊಳ್ಳುವ ಎಸ್‌ಪಿಜಿ ಪಡೆಗಳ ಜೊತೆಗೆ, ಗ್ರೇಹೌಂಡ್ಸ್ ಮತ್ತು ಆಕ್ಟೋಪಸ್ ತಂಡಗಳು ಭದ್ರತೆಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ಇಬ್ಬರು ಹೆಚ್ಚುವರಿ ಡಿಜಿಪಿಗಳ ಮೇಲ್ವಿಚಾರಣೆಯಲ್ಲಿ ಸುಮಾರು 10,000 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆಯಲ್ಲಿ ಭಾಗವಹಿಸಲಿದ್ದಾರೆ.
ಭದ್ರಕಾಳಿ ದೇವಾಲಯದಲ್ಲಿ ಪೂಜೆ
ಪ್ರಧಾನಿ ನರೇಂದ್ರ ಮೋದಿ ಭೇಟಿ ಅಂಗವಾಗಿ ಭದ್ರಕಾಳಿ ದೇವಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಪ್ರಧಾನಿ 15 ನಿಮಿಷಗಳ ಕಾಲ ಅಲ್ಲಿಯೇ ಇರುತ್ತಾರೆ. ಮೋದಿ ಭಾಷಣವನ್ನು ಜನರು ವೀಕ್ಷಿಸಲು 30 ಎಲ್ ಇಡಿ ಪರದೆಗಳನ್ನು ವಿಶೇಷವಾಗಿ ಅಳವಡಿಸಲಾಗಿದೆ. ಇದೇ ಮೊದಲ ಬಾರಿಗೆ ವರಂಗಲ್‌ಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಯವರಿಗೆ ಅದ್ಧೂರಿ ಸ್ವಾಗತ ಕೋರಲು ರಾಜ್ಯ ಬಿಜೆಪಿ ಸಜ್ಜಾಗಿದೆ.
ಮೋದಿ ಭೇಟಿಯ ವೇಳಾಪಟ್ಟಿ ಹೀಗಿದೆ
- ಪ್ರಧಾನಿ ಮೋದಿ ವಾರಣಾಸಿಯಿಂದ ವಿಶೇಷ ವಿಮಾನದಲ್ಲಿ ಬೆಳಿಗ್ಗೆ 7.35 ಕ್ಕೆ ಹೊರಡಲಿದ್ದಾರೆ. 9.25 ಗಂಟೆಗೆ ಹಕೀಂಪೇಟ್ ವಿಮಾನ ನಿಲ್ದಾಣವನ್ನು ತಲುಪುತ್ತಾರೆ
- ಬೆಳಗ್ಗೆ 9.30ಕ್ಕೆ ಹೊರಟು 10.15ಕ್ಕೆ ಮಾಮನೂರು ಹೆಲಿಪ್ಯಾಡ್‌ಗೆ ತಲುಪಲಿದ್ದಾರೆ.
- ಅಲ್ಲಿಂದ ರಸ್ತೆ ಮಾರ್ಗವಾಗಿ 10.30ಕ್ಕೆ ಭದ್ರಕಾಳಿ ದೇವಸ್ಥಾನ. 10.45ರವರೆಗೆ ಪ್ರಧಾನಿ ದೇವಸ್ಥಾನದಲ್ಲಿ ಇರುತ್ತಾರೆ.
- ದೇವಸ್ಥಾನದಿಂದ ಬೆಳಗ್ಗೆ 10.50ಕ್ಕೆ ಹೊರಟು 11 ಗಂಟೆಗೆ ಹನ್ಮಕೊಂಡದ ಕಲಾ ಮತ್ತು ವಿಜ್ಞಾನ ಕಾಲೇಜು ಮೈದಾನ ತಲುಪಲಿದೆ.
- 11.35ರವರೆಗೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಯಲಿದೆ.
- 11.45ಕ್ಕೆ ಅಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡುವರು.
- ಪ್ರಧಾನಿ ಮೋದಿ ಮಧ್ಯಾಹ್ನ 12.20ರವರೆಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು
- ಮಧ್ಯಾಹ್ನ 12.25ಕ್ಕೆ ಮೋದಿ ರಸ್ತೆ ಮೂಲಕ ಹೆಲಿಪ್ಯಾಡ್ ತಲುಪಲಿದ್ದಾರೆ.
- 1.10 ಕ್ಕೆ ಹೆಲಿಕಾಪ್ಟರ್ ಮೂಲಕ ಹಕೀಂಪೇಟೆ ವಿಮಾನ ನಿಲ್ದಾಣ ತಲುಪುತ್ತಾರೆ.
- ಮಧ್ಯಾಹ್ನ 1.15ಕ್ಕೆ ಹೊರಟು ಮಧ್ಯಾಹ್ನ 3.25ಕ್ಕೆ ರಾಜಸ್ಥಾನದ ಬಿಕಾನೇರ್ ತಲುಪಲಿದ್ದಾರೆ