ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಹೋದರೂ ಈ ನಟನ ಮೇಲಿರುವ ಪ್ರೀತಿ 100ರಷ್ಟು ಕಡಿಮೆಯಾಗಿಲ್ಲ. ಬಳ್ಳಾರಿ ಜೈಲಿನ ಖೈದಿ ಸಂಖ್ಯೆ 511 ನ್ನು ಅಭಿಮಾನಿಗಳು ಟ್ರೆಂಡ್ ಮಾಡುತ್ತಿದ್ದಾರೆ.
ಆಟೋ ಬೈಕ್ ಸೇರಿದಂತೆ ತಮ್ಮ ವಾಹನಗಳಲ್ಲಿ ಬಳ್ಳಾರಿ ಖೈದಿ ನಂ.511 ಎಂದು ಸ್ಟಿಕ್ಕರ್ ಹಾಕಿಸಿಕೊಂಡು ಟ್ರೆಂಡಿಂಗ್ ಮಾಡುತ್ತಿದ್ದಾರೆ. ಇಷ್ಟು ದಿನ 6106 ಟ್ಯಾಟೂ ಹಾಕಿಸಿದ್ದ ಅಭಿಮಾನಿಗಳನ್ನು ಅದನ್ನು ತೆಗೆಸಿ ಬಳ್ಳಾರಿ ಖೈದಿ ನಂ.511 ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಬೆಂಬಲಕ್ಕೆ ಹಲವರು ನಿಂತಿದ್ದಾರೆ. ದರ್ಶನ್ ಅಭಿಮಾನಿಗಳು ನಮ್ಮ ಬಾಸ್ ಅನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ, ಅವರು ನಮ್ಮ ಬಾಸ್ ಎಂದು ಹೇಳುತ್ತಿದ್ದಾರೆ.