ಹೊಸದಿಗಂತ ವರದಿ,ಹಾಸನ :
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಿತಂಗೌಡ ಅವರಿಗೆ ಇನ್ನೂ ಯಂಗ್ ಏಜ್, ಪಾಪ ಬಿರುಸಿನಲ್ಲಿ ಮಾತಾಡುತ್ತಾರೆ, ಅವನು ಒಬ್ಬ ನಮ್ಮ ತಮ್ಮ ಅಲ್ವೆ? ಕುಳಿತು ಸರಿ ಮಾಡೋಣ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಚನ್ನಂಗಿಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಹಾಸನ, ಮಂಡ್ಯ ಕ್ಷೇತ್ರಗಳಲ್ಲಿ ಬಿಜೆಪಿಗೆ ಟಿಕೆಟ್ ನೀಡುವಂತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರೀತಂ ಅವರನ್ನೇ ನಿಲ್ಲಿಸಬೇಕೆಂದರೆ ನಿಲ್ಲಿಸೋಣ.ಅವರೇ ನಿಲ್ಲಬೇಕು ಎನ್ನುವ ಆಸೆ ಇದ್ದರೆ ಚರ್ಚೆ ಮಾಡೋಣ. ನಾವೂ, ಅವರು ಅಣ್ಣ-ತಮ್ಮಂದಿರ ತರಹ ಹೋಗಬೇಕಲ್ವಾ? ಪಾಪ ಯಾರೋ ಅವನ ಮನಸ್ಸಿನ ಮೇಲೆ ಪರಿಣಾಮ ಆಗುವ ಹಾಗೇ ಹೇಳುತ್ತಾರೆ. ಅವರು ಮಾತನಾಡುತ್ತಾರೆ. ಕುಳಿತು ಸರಿ ಮಾಡೋಣ ಅದೇನು ಸಮಸ್ಯೆ ಇಲ್ಲಾ ಎಂದರು.