ಖಾಸಗಿ ಸಾರಿಗೆ ಸಂಸ್ಥೆ ಮುಷ್ಕರ: ಹೋರಾಟ ಮಾಡೋದು ಅವರ ಹಕ್ಕು, ಮಾಡಲಿ ಎಂದ ಸಚಿವ ರಾಮಲಿಂಗಾ ರೆಡ್ಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖಾಸಗಿ ಸಾರಿಗೆ ಸಂಸ್ಥೆ ಮುಷ್ಕರಕ್ಕೆ (Private Transport Strike) ಕರೆ ಕೊಟ್ಟಿದ್ದು, ಹೋರಾಟ ಮಾಡೋದು ಅವರ ಹಕ್ಕು, ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ಖಾಸಗಿ ಸಾರಿಗೆ ನೌಕರರ ಹಲವಾರು ಬೇಡಿಕೆಗಳು ಇವೆ. ಸುಮಾರು 20-22 ಬೇಡಿಕೆಗಳಿವೆ. ಅದರಲ್ಲಿ 2 ಪ್ರಮುಖವಾಗಿವೆ. ಶಕ್ತಿ ಯೋಜನೆ ವಿಚಾರದಲ್ಲಿ ಅವರ ಬೇಡಿಕೆ ಇದೆ. ಎರಡನೆಯದು ಸ್ವಲ್ಪ ಟ್ಯಾಕ್ಸ್ ಹೆಚ್ಚಳವಾಗಿರೋದು ಎಂದು ತಿಳಿಸಿದರು.

ಅವರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ಅವರ ಹಕ್ಕು, ಮಾಡಲಿ. ಸರ್ಕಾರ ಈ ಬಗ್ಗೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಿದೆ. ನಾನು ಅವರಿಗೆ ಮುಷ್ಕರ ಮಾಡುವುದು ಬೇಡ ಎನ್ನಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!