ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಬಾಲಿವುಡ್‌ ನಟ ಶಾರುಖ್‌ ಖಾನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ ಖ್ಯಾತ ನಟ ಶಾರುಖ್‌ ಖಾನ್‌ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್‌ ಅನ್ನು ರೀಟ್ವೀಟ್‌ ಮಾಡಿರುವ ಶಾರುಖ್‌ ಖಾನ್‌, ಜಿ 20 ಶೃಂಗಸಭೆಯ ಯಶಸ್ಸಿಗೆ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ.

‘ಭಾರತದ ಜಿ 20 ಅಧ್ಯಕ್ಷ ಸ್ಥಾನದ ಯಶಸ್ಸಿಗಾಗಿ ಮತ್ತು ವಿಶ್ವದ ಜನರಿಗೆ ಉತ್ತಮ ಭವಿಷ್ಯಕ್ಕಾಗಿ ರಾಷ್ಟ್ರಗಳ ನಡುವೆ ಏಕತೆಯನ್ನು ಬೆಳೆಸುವುದಕ್ಕಾಗಿ ಗೌರವಾನ್ವಿತ ಪ್ರಧಾನಿ ಮೋದಿ ಜೀ ಅವರಿಗೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಗೌರವ ಮತ್ತು ಹೆಮ್ಮೆಯ ಭಾವನೆ. ಸರ್, ನಿಮ್ಮ ನಾಯಕತ್ವದಲ್ಲಿ, ನಾವು ಪ್ರತ್ಯೇಕವಾಗಿರದೆ ಏಕತೆಯಲ್ಲಿ ಏಳಿಗೆ ಹೊಂದುತ್ತೇವೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂದು ಕಿಂಗ್ ಖಾನ್‌ ಶಾರುಖ್‌ ಖಾನ್‌ ಟ್ವೀಟ್‌ ಮೂಲಕ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!