ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರ ರಚನೆಯಾಗಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕುರ್ಚಿ ಅಲಂಕರಿಸಿದ್ದರೂ ಕಾಂಗ್ರೆಸ್‌ನಲ್ಲಿ ನಾನು ಸಿಎಂ ಎಂಬ ಕನವರಿಕೆ ಮಾತ್ರ ಹೋಗಿಲ್ಲ. ನಾನೂ ಸಿಎಂ ಹುದ್ದೆಗೆ ಅರ್ಹ, ಮುಖ್ಯಮಂತ್ರಿಯಾಗಲು ನಾನು ಸಿದ್ಧ ಎಂಬುವವರ ಪೈಕಿ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಸೇರಿದ್ದಾರೆ.
ಮೈಸೂರು ಜಿ.ಪಂ.ಕಚೇರಿಯಲ್ಲಿ ಸಿಎಂ ಆಗಿ ತಾನೇ ಮುಂದುವರಿಯುತ್ತೇನೆಂದು ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅದು ಅವರ ವೈಯಕ್ತಿಕ ಅಭಿಪ್ರಾಯ ಮುಖ್ಯಮಂತ್ರಿಯಾಗಿ ಯಾರು ಮುಂದುವರಿಯಬೇಕೆಂದು ಹೈಕಮಾಂಡ್‌ಗೆ ಬಿಟ್ಟ ನಿರ್ಧಾರ. ಒಂದು ವೇಳೆ ಹೈಕಮಾಂಡ್ ನೀವು ಸಿಎಂ ಆಗುವಂತೆ ಹೇಳಿದರೆ, ನಾನು ಸಿದ್ಧ ಎಂಬ ಮಾತನ್ನು ಹೇಳಿದರು.
ಅಧಿಕಾರ ಹಂಚಿಕೆ ಬಗ್ಗೆ ದೆಹಲಿಯಲ್ಲಿ ಈಗಾಗಲೇ ಚರ್ಚೆ ನಡೆದಿದೆ ಆ ನಾಲ್ವರಲ್ಲಿ ಮಾತ್ರ ಈ ವಿಚಾರದ ಬಗ್ಗೆ ಗೊತ್ತಿದೆ. ಆದರೆ ಅವರವರ ಅಭಿಪ್ರಾಯ ಅವರವರಿಗೇ ಬಿಟ್ಟಿದ್ದು ಎಂದರು.