Monday, March 27, 2023

Latest Posts

ತಾಯ್ತನದ ಸಂತಸ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನಾಸ್‌ ತಂದೆ, ತಾಯಿಯಾಗಿದ್ದಾರೆ.
ಸೆರೊಗೆಸಿ (ಬಾಡಿಗೆ ತಾಯ್ತನ) ಮೂಲಕ ಈ ಜೋಡಿ ಪೋಷಕರಾಗುತ್ತಿದ್ದಾರೆ. ಈ ಸಂತಸದ ವಿಚಾರವನ್ನು ಪ್ರಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸರೋಗೆಸಿ ಮೂಲಕ ನಾವು ಮಗುವನ್ನು ಸ್ವಾಗತಿಸಿದ್ದೇವೆ. ಕುಟುಂಬದ ಕಡೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿದೆ. ಹೀಗಾಗಿ ನಮಗೆ ಪ್ರೈವಸಿ ಬೇಕಿದೆ. ಧನ್ಯವಾದಗಳು ಎಂದು ತಿಳಿಸಿದ್ದಾರೆ.
ನಿಕ್‌ ಹಾಗೂ ಪ್ರಿಯಾಂಕಾ ಚೋಪ್ರಾ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 39 ವರ್ಷದ ಪ್ರಿಯಾಂಕಾ ಪತಿ ನಿಕ್‌ ಗಿಂದ 10 ವರ್ಷ ಹಿರಿಯು.
ಇತ್ತೀಚೆಗಷ್ಟೆ ನಿಕ್‌ ಹಾಗೂ ಪ್ರಿಯಾಂಕಾ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಅವರಿವಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ತಾಯ್ತನದ ಸಿಹಿ ಸುದ್ದಿ ನೀಡಿ ಈ ರೀತಿಯಾದಂತಹ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!