ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಸದಾ ಸುದ್ದಿಯಲ್ಲಿರುತ್ತಾರೆ. ಪ್ರಿಯಾಂಕಾ ಆಗಾಗ್ಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಸಂಗೀತ ಕಾರ್ಯಕ್ರಮವೊಂದರಲ್ಲಿ ನಿಕ್ ವೇದಿಕೆ ಮೇಲಿಂದ ಕೆಳಗೆ ಬಿದ್ದಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಾಸ್ ಅವರು ತಮ್ಮ ಸಹೋದರರಾದ ಕೆವಿನ್ ಮತ್ತು ಜೋ ಜೋನಾಸ್ ಅವರೊಂದಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾನ್ಸರ್ಟ್ ಆಯೋಜಿಸುತ್ತಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಿಕ್ ವೇದಿಕೆ ಮೇಲೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಪ್ರದರ್ಶನದಲ್ಲಿ ತಲ್ಲೀನರಾಗಿದ್ದ ನಿಕ್ ಇದ್ದಕ್ಕಿದ್ದಂತೆ ವೇದಿಕೆಯ ಕೊನೆಯ ತುದಿಗೆ ತೆರಳಿ ಕಾಳು ಜಾರಿ ಕೆಳಗೆ ಬಿದ್ದರು. ತಕ್ಷಣವೇ ಎದ್ದು ನಿಂತು ಕಾರ್ಯಕ್ರಮವನ್ನು ಪ್ರಾರಂಭಿಸಿದರು.
CALL TMZ!!!!! NICK FELL!!!!! pic.twitter.com/RY6Drl5dwU
— h 🍒🪩 (@x0heathyyy) August 16, 2023