ಪ್ರಿಯಾಂಕಾ ಜವಾಲ್ಕರ್ ಕಂಡು ಕ್ಲೀನ್​ ಬೋಲ್ಡ್ ಆದ್ರಾ ವೆಂಕಟೇಶ್ ಅಯ್ಯರ್ ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಕೆಕೆಆರ್ ನ ಸ್ಪೋಟಕ ಬ್ಯಾಟ್ಸ್ ಮ್ಯಾನ್ ವೆಂಕಟೇಶ್ ಅಯ್ಯರ್ ಮತ್ತು​ ತೆಲುಗು ನಟಿ ಪ್ರಿಯಾಂಕಾ ಜವಾಲ್ಕರ್ ನಡುವೆ ಪ್ರೀತಿ ಶುರುವಾಗಿದೆಯೇ ? ಹೀಗೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಚಾಟ್​ ಮಾಡಿದ್ದು ಎಲ್ಲೆಡೆ ಚಾಟ್ ವೈರಲ್ ಆಗಿದ್ದು, ಅವರ ಕಾಮೆಂಟ್​​ಗಳನ್ನು ನೋಡಿದ ನೆಟಿಜನ್ಸ್​, ಅಯ್ಯರ್ ಮತ್ತು​ ಜವಾಲ್ಕರ್ ನಟುವೆ ಏನೋ ನಡೆಯುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.ವೆಂಕಟೇಶ್ ನೀವು ತುಂಬಾ ಮುದ್ದಾಗಿದ್ದಿರಿ ಎಂದು ಹಾಡಿ ಹೊಗಳಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕ್ಯೂಟ್ ಯಾರು? ನೀವಾ? ಎಂದು ನಟಿ ಅಯ್ಯರ್ ಕೂಡ ತಮಾಷೆಯ ಜೊತೆಗೆ ವೆಂಕಟೇಶ್ ಅಯ್ಯರ್​ಗೆ ಪ್ರಶ್ನೆ ಹಾಕಿದ್ದಾರೆ.
ಇಬ್ಬರ ನಡುವಿನ ಮಾತುಕತೆ ಜಾಲತಾಣದಲ್ಲಿ ಸಾವಿರಾರು ಲೈಕ್​ಗಳು ಮತ್ತು ಕಾಮೆಂಟ್ಸ್​​ ಬಂದಿದ್ದು ಅವರ ಪೋಸ್ಟ್​ಗಳು ವೈರಲ್ ಆಗುತ್ತಿವೆ.

ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ತೆಲುಗು ನಟಿ ಹಾಕಿರುವ ಬೋಲ್ಡ್​ ಫೋಟೋಗೆ ಕಾಮೆಂಟ್ ಮಾಡುವುದರ ಮೂಲಕ ಟ್ರೋಲ್ ಆಗುತ್ತಿದ್ದಾರೆ.ಇನ್ನೊಂಡೆದೆ ಇವರಿಬ್ಬರ ನಡುವೆ ಪ್ರೀತಿ ಇರಬಹುದಾ ಎಂದು ನೆಟಿಜನ್ಸ್​ ಅನುಮಾನಗಳ ವ್ಯಕ್ತಪಡಿಸಿ ಕಾಮೆಂಟ್​ ಹಾಕುತ್ತಿದ್ದಾರೆ.
ಮಧ್ಯಪ್ರದೇಶ ಮೂಲದ ವೆಂಕಟೇಶ್ ಅಯ್ಯರ್ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಖ್ಯಾತಿ ಹೊಂದಿದ ಯುವ ಕ್ರಿಕೆಟಿಗ . ಜೊತೆಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಬೆಳಕಿಗೆ ಬಂದ ವೆಂಕಟೇಶ್ ಅಯ್ಯರ್ ಟೀಂ ಇಂಡಿಯಾದಲ್ಲಿಯೂ ಸ್ಥಾನ ಪಡೆದಿದ್ದಾರೆ.
ಇನ್ನು ಟ್ಯಾಕ್ಸಿವಾಲಾ ಚಿತ್ರದ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದ ಪ್ರಿಯಾಂಕಾ ಜವಾಲ್ಕರ್ ಸದ್ಯ ಟಾಲಿವುಡ್​ ಬ್ಯೂಸಿ ನಟಿಯಲ್ಲಿ ಒಬ್ಬರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!