Wednesday, September 27, 2023

Latest Posts

ಕಲಬುರಗಿ ಉಸ್ತುವಾರಿಯಾಗಿ ಪ್ರಿಯಾಂಕ ಖಗೆ೯: ಜಿಲ್ಲೆಗೆ ಸಂತಸದ ಸಂಗತಿ ಎಂದ ಜಗದೇವ್ ಗುತ್ತೇದಾರ್

ಹೊಸದಿಗಂತ ವರದಿ, ಕಲಬುರಗಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕಾಂಗ್ರೆಸ್ ಸರಕಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರು ನೇಮಕಾಗೊಂಡಿದ್ದು ಸಂತೋಷ ತಂದಿದ್ದು, ಮೇಲಾಗಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿ ಜಿಲ್ಲೆಗೆ ಪ್ರಿಯಾಂಕ ಎಂ. ಖರ್ಗೆಯವರನ್ನು ನೇಮಕ ಮಾಡಿದ್ದು,ಜಿಲ್ಲೆಗೆ ಸಂತಸದ ಸಂಗತಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್ ಹಷ೯ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ರಾಯಚೂರು ಜಿಲ್ಲೆಗೆ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಯಾದಗಿರಿ ಜಿಲ್ಲೆಗೆ ಶರಣಬಸಪ್ಪ ದರ್ಶನಾಪುರ ರವರನ್ನು ಅದರಂತೆ ಬೀದರ ಜಿಲ್ಲೆಗೆ ಈಶ್ವರ ಖಂಡ್ರೆ ಯವರನ್ನು ನೇಮಿಸಿದ್ದಕ್ಕೆ ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಅದೇ ರೀತಿ ಈ ಹಿರಿಯ ಅನುಭವಿ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ನೀಡಿದ್ದಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಹೆಚ್ಚು ರೀತಿಯಲ್ಲಿ ಅಭಿವೃದ್ಧಿಯಾಗಲು ಮತ್ತು ಸಾರ್ವಜನಿಕರ ಕೆಲಸಗಳು ಸರಳ ರೀತಿಯಲ್ಲಿ ಆಗಲು ಅನುಕೂಲವಾಗುತ್ತದೆ. ಅದೇ ರೀತಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ನೂತನ ಉಸ್ತುವಾರಿ ಸಚಿವರೊಂದಿಗೆ ಭೇಟಿಯಾಗಿ ತಮ್ಮ ತಮ್ಮ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಲು ಅನುಕೂಲವಾಗುತ್ತದೆಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!