ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೋ ಕಬಡ್ಡಿ ಟೂರ್ನಿಯಲ್ಲಿ ಇಂದು ಬೆಂಗಳೂರು ಬುಲ್ಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ‍್ಸ್ ಎದುರಾಗಲಿದೆ.
ಈಗಾಗಲೇ ನಾಲ್ಕು ಗೆಲುವು ಕಂಡಿರುವ ಬೆಂಗಳೂರು ಬುಲ್ಸ್ ತಂಡ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ. ಪವನ್ ಶರಾವತ್ ಪಡೆಗೆ ಇಂದು ಪಿಂಕ್ ಪ್ಯಾಂಥರ‍್ಸ್ ಎದುರಿಸುವ ಅವಕಾಶ ಸಿಗಲಿದೆ.
ಪುಣೇರಿ ಪಲ್ಟನ್ಸ್ ವಿರುದ್ಧ ಗೆದ್ದು ಬುಲ್ಸ್ ಅಗ್ರಸ್ಥಾನಕ್ಕೇರಿತ್ತು. ಆದರೆ ತೆಲುಗು ಟೈಟನ್ಸ್ ವಿರುದ್ಧ ದಬಾಂಗ್ ಡೆಲ್ಲಿ ಗೆಲುವು ಸಾಧಿಸಿ ಇದೀಗ ಅಗ್ರಸ್ಥಾನಕ್ಕೇರಿದೆ. ಬೆಂಗಳೂರು ಮತ್ತೆ ಎರಡನೇ ಸ್ಥಾನಕ್ಕೆ ಇಳಿದಿದೆ. ಪಿಂಕ್ ಪ್ಯಾಂಥರ‍್ಸ್ ಅಂಕಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮತ್ತೆ ಬೆಂಗಳೂರು ಅಗ್ರಸ್ಥಾನಕ್ಕೆ ಏರಬಹುದಾಗಿದೆ.