ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಬಹುಮತ ಸಿಗಲಿದೆ ಎಂದು ಬಹುತೇಕ ಎಲ್ಲ ಮತದಾನೋತ್ತರ ಸಮೀಕ್ಷೆಗಳು ಹೇಳಿವೆ. ಆದರೆ, ಕೆಲವು ಸಮೀಕ್ಷೆಗಳು ಮತ್ತೊಮ್ಮೆ ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿವೆ.
ಜಾರ್ಖಂಡ್‌ನಲ್ಲಿ ಇಂದು ಸಂಜೆ ಮತದಾನ ಮುಕ್ತಾಯವಾಗಿದೆ. ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು ಎನ್ಡಿಎಗೆ ತೀವ್ರ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 2024ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ.
ಮ್ಯಾಟ್ರಿಜ್ ಸಮೀಕ್ಷೆ:
ಎನ್‌ಡಿಎ: 42-47
ಇಂಡಿಯಾ: 25-30
ಇತರರು: 1-4
ಪೋಲ್ ಆಫ್ ಪೋಲ್ ಸಮೀಕ್ಷೆ
ಎನ್‌ಡಿಎ: 47 ಸ್ಥಾನ
ಕಾಂಗ್ರೆಸ್: 30
ಇತರರು: 4 ಸ್ಥಾನ
ಟೈಮ್ಸ್ ನೌ ಸಮೀಕ್ಷೆ:
ಎನ್‌ಡಿಎ: 40-44
ಇಂಡಿಯಾ: 30-40
ಇತರರು: 1 ಸ್ಥಾನ
ಪೀಪಲ್ ಪಲ್ಸ್ ಸಮೀಕ್ಷೆ:
ಬಿಜೆಪಿ: 44-53
ಇಂಡಿಯಾ: 25-37
ಇತರೆ: 5-9
ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
ಎನ್‌ಡಿಎ: 17-27
ಇಂಡಿಯಾ: 49-59
ಇತರರು:1-6
ಚಾಣಕ್ಯ
ಎನ್‌ಡಿಎ: 45-50
ಇಂಡಿಯಾ: 35-38
ಇತರರು:3-5
ದೈನಿಕ್ ಭಾಸ್ಕರ್
ಎನ್‌ಡಿಎ: 37-40
ಇಂಡಿಯಾ: 36-39
ಇತರರು:0-2
ಎಲೆಕ್ಟೊರಲ್ ಎಡ್ಗೆ
ಎನ್‌ಡಿಎ: 32
ಇಂಡಿಯಾ: 42
ಇತರರು:7
ಪಿ. ಮಾರ್ಕ್
ಎನ್‌ಡಿಎ:31-40
ಇಂಡಿಯಾ: 37-47
ಇತರರು:1-6