ಹೊಸದಿಗಂತ ವರದಿ ಬೆಂಗಳೂರು:
ಪಾಕ್ ಪರ ಘೋಷಣೆ ಇಂದು ವಿಧಾನ ಪರಿಷತ್ ಕಲಾಪವನ್ನು ಕಾವೇರಿಸಿತು.
ವಿರೋಧ ಪಕ್ಷದ ಸಚೇತಕ ಎಸ್.ರವಿ ಅವರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಜಬ್ಬರ್ ಅವರು ಏಕವಚನ ಪ್ರಯೋಗ ಮಾಡಿದ್ದು, ಇದು ಇನ್ನಷ್ಟು ಗದ್ದಲಕ್ಕೆ ಕಾರಣವಾಯಿತು.
ಈ ವಿಚಾರವಾಗಿ ರೊಚ್ಚಿಗೆದ್ದ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿದರು. ಸದನದಲ್ಲಿ ಜಟಾಪಟಿ ಹೆಚ್ಚಾಗುತ್ತಿದ್ದಂತೆ ಸಭಾಪತಿಗಳು ಕಲಾಪವನ್ನು ಮುಂದೂಡಿದರು.