ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಿಲ್ಲದ ಬಗ್ಗೆ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ ನೀಡಿದ್ದಾರೆ.
ನನ್ನ ಆರೋಗ್ಯ ಸರಿ ಇರಲಿಲ್ಲ. ಮನೆಯಿಂದ ಹೊರಬರಲು ಆಗಲಿಲ್ಲ. ವೈದ್ಯರ ಸಲಹೆ ಮೇರೆಗೆ ಆರು ಗಂಟೆಗೆ ಬರಬೇಕಾಯ್ತು. ಅಸಮಾಧಾನ ಇದ್ದಿದ್ದರೆ ಬಂದು ಅಡ್ಡಮತದಾನ ಮಾಡುತ್ತಿದ್ದೆ. ಆದರೆ ನಾನು ಹಾಗೆ ಮಾಡಿಲ್ಲ. ಆರೋಗ್ಯ ಸರಿ ಇರಲಿಲ್ಲ. ಯಾರಿಗೂ ಹೆದರಿ ಮನೆಯಲ್ಲಿ ಕೂತಿಲ್ಲ. ನನ್ನದೇ ಆದ ಅಸಮಾಧಾನ ಇದೆ ಆದರೆ ಅದೆಲ್ಲಾ ಜಿಲ್ಲಾ ಮಟ್ಟದ್ದು ಅಷ್ಟೆ ಎಂದಿದ್ದಾರೆ.