July 18, 2026
Saturday, July 18, 2026
spot_img

ನಿರ್ಮಾಪಕ ಬಾಮಾ ಹರೀಶ್​​ಗೆ ಪುತ್ರ ವಿಯೋಗ, ಟ್ರೆಕ್ಕಿಂಗ್‌ ಹೋಗಿದ್ದ ವೇಳೆ ಹೃದಯಾಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗದ ನಿರ್ಮಾಪಕ, ಕರ್ನಾಟ ಫಿಲಂ ಚೇಂಬರ್‌ ಮಾಜಿ ಅಧ್ಯಕ್ಷ ಬಾಮಾ ಹರೀಶ್‌ ಪುತ್ರ ನಿಧನರಾಗಿದ್ದಾರೆ.

29 ವರ್ಷದ ಉಲ್ಲಾಸ್‌ ಶಿವಮೊಗ್ಗದ ಕೊಡಚಾದ್ರಿಯಲ್ಲಿ ಟ್ರೆಕ್ಕಿಂಗ್‌ ಮಾಡುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಡಿಸೆಂಬರ್‌ನಲ್ಲಿ ಚಂದನ್‌ ಗೌಡ ಜೊತೆಗೆ ಉಲ್ಲಾಸ್‌ಗೆ ನಿಶ್ಚಿತಾರ್ಥವಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿತ್ತು.

ಉಲ್ಲಾಸ್ ಗೌಡ – ಚಂದನಾ ಗೌಡ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಕುಟುಂಬಸ್ಥರು ನಿಶ್ಚಯಿಸಿದಂತೆ ಉಲ್ಲಾಸ್ ಗೌಡ – ಚಂದನಾ ಗೌಡ ಮದುವೆಗೆ ಸಮ್ಮತಿ ನೀಡಿದ್ದರು. ಇತ್ತೀಚೆಗೆ ಮನೆಯಲ್ಲಿ ಸರಳವಾಗಿ ದೀಪದ ಶಾಸ್ತ್ರ ನೆರವೇರಿಸಲಾಗಿತ್ತು. ಆದರೆ ಈಗ ಉಲ್ಲಾಸ್ ಹೃದಯಾಘಾತದ ಸುದ್ದಿ ಎಲ್ಲರಿಗೂ ಆಘಾತ ಕೊಟ್ಟಿದೆ.

ಗೆಳೆಯರೊಂದಿಗೆ ಕೊಡಚಾದ್ರಿ ಟ್ರೆಕ್ಕಿಂಗ್‌ಗೆ ಉಲ್ಲಾಸ್‌ ಹೋಗಿದ್ದರು. ಟ್ರೆಕ್ಕಿಂಗ್‌ ಮಾಡುವಾಗಲೇ ತೀವ್ರ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸದ್ಯ ಅವರ ಮೃತದೇಹವನ್ನು ಬೆಂಗಳೂರಿಗೆ ತರಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !