ಆಗಸ್ಟ್ 1ರಿಂದ ಶೂಟಿಂಗ್ ಬಂದ್: ನಿರ್ಮಾಪಕರ ಸಂಘದಿಂದ ಅಧಿಕೃತ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಕಳೆದ ಕೆಲವು ದಿನಗಳಿಂದ ತೆಲುಗು ಚಿತ್ರರಂಗದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ನಿರ್ಮಾಪಕರು ಸಾಕಷ್ಟು ತೊಂದರೆ  ಅನುಭವಿಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಕೊರೊನಾ ಮಹಾಮಾರಿಯ ನಂತರ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎಂಬುದು ನಿರ್ಮಾಪಕರ ಆತಂಕ.   ನಿರ್ಮಾಪಕರ ಸಂಘದ ಸಭೆಯಲ್ಲಿ ಭಾಗವಹಿಸಿದ 21ಮಂದಿ ಸದಸ್ಯರು ಸಿನಿಮಾ ಶೂಟಿಂಗ್‌ ಸ್ಥಗಿತಗೊಳಿಸುವ ಬಗ್ಗೆ ನಿರ್ಣಯ ಕೈಗೊಂಡರು.

ತೆಲುಗು ಚಲನಚಿತ್ರ ನಿರ್ಮಾಪಕರ ಸಂಘದ ಅಧಿಕೃತ ಹೇಳಿಕೆಯ ಪ್ರಕಾರ, ಟಾಲಿವುಡ್‌ನಲ್ಲಿ ಎಲ್ಲಾ ರೀತಿಯ ಚಲನಚಿತ್ರ ಶೂಟಿಂಗ್‌ಗಳನ್ನು ಆಗಸ್ಟ್ 1 ರಿಂದ ಬಂದ್‌ ಮಾಡಲಾಗುವುದು. ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ, ಶೀಘ್ರದಲ್ಲೇ ಈ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಏಕಾಏಕಿ ಶೂಟಿಂಗ್ ನಿಲ್ಲಿಸುವುದು ಸರಿಯಲ್ಲ, ಹೀಗೆ ಮಾಡಿದರೆ ಸಿನಿಮಾದಲ್ಲೆ ಕೆಲಸ ಮಾಡುವ ಸಣ್ಣ-ಪುಟ್ಟ ಕಾರ್ಮಿಕರು ಕಷ್ಟಕ್ಕೆ ಸಿಲುಕುತ್ತಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಶೂಟಿಂಗ್ ನಿಲ್ಲಿಸುವ ನಿರ್ಧಾರಕ್ಕೆ ನಿರ್ಮಾಪಕರ ಸಂಘ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Producers Gild To Hold Shootings

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!