Sunday, December 10, 2023

Latest Posts

ನಾಡಿನ ಪರಂಪರೆ ಉಳಿವಿಗೆ ದಸರೆಯಂತಹ ಕಾರ್ಯಕ್ರಮಗಳು ಅಗತ್ಯ : ಕೃಷ್ಣ ಭೈರೇಗೌಡ

ಹೊಸದಿಗಂತ ವರದಿ ಶ್ರೀರಂಗಪಟ್ಟಣ :

ಕಲೆ, ಸಂಸ್ಕೃತಿ, ಭಾಷೆ, ಪರಂಪರೆ ಇತಿಹಾಸ ಉಳಿಯಬೇಕಾದರೆ ದಸರೆ ಅಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐತಿಹಾಸಿಕ ದಸರಾ ಕಾರ್ಯಕ್ರಮಗಳು ಇತಿಹಾಸದ ವೈಭವ ಮರುಕಳಿಸಿದೆ ಎಂದರು.

ದಸರಾ ಹಬ್ಬ ಆಚರಣೆ ಮಾಡುವುದು ಒಂದು ಕಡೆಯಾದರೆ. ನಾಡಿನಲ್ಲಿ ಮಳೆಕೊರತೆಯಿಂದ ಸಂಕಷ್ಟದಲ್ಲಿರುವುದನ್ನು ನೋಡುತ್ತಿದ್ದೇವೆ. ದಸರಾ ಕಾರ್ಯಕ್ರಮ ದೇಶದ ಎಲ್ಲಾ ಕಡೆ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಬರಗಾಲವಿದ್ದರೂ ಇರುವ ಸಂಪನ್ಮೂಲದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ದಸರಾ ಆಚರಿಸಲಾಗುತ್ತಿದೆ ಎಂದರು.

ಶ್ರೀರಂಗಪಟ್ಟಣದಲ್ಲಿ ನಾಡಿನ ಪ್ರತೀಕವಾಗಿ ದಸರಾ ಆಚರಣೆ ಇಲ್ಲೇ ಪ್ರಾರಂಭವಾಯಿತು.. ಸುಮಾರು 600 ವರ್ಷಗಳ ಇತಿಹಾಸವಿರುವ ದಸರಾ ಹಬ್ಬ ಮೊದಲು ಪ್ರಾರಂಭವಾಗಿದ್ದು, ಶ್ರೀರಂಗಪಟ್ಟಣದಲ್ಲಿ ನಂತರ ಮೈಸೂರಿಗೆ ವರ್ಗಾಯಿಸಲಾಯಿತು. ಹಲವಾರು ಕಾರಣಗಳಿಂದ ನಿಂತುಹೋಗಿದ್ದ ದಸರಾ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಶಾಸಕರಾಗಿದ್ದ ಪ್ರಾರಂಭಿಸಿದರು. ಶ್ರೀರಂಗಪಟ್ಟಣ ದಸರಾ ಸಂಬ್ರಮ ಬೆಳೆದು ಮೈಸೂರು ದಸರಾ ರೀತಿ ಉತ್ತುಂಗಕ್ಕೆ ಏರಲಿ ಎಂದು ಆಶಿಸಿದರು.
ಕಾವೇರಿ ನದಿ ಉದ್ದಕ್ಕೂ ಶ್ರೀರಂಗ ದೇವಾಲಯವಿದೆ. ಇಂತಹ ಇತಿಹಾಸವಿರುವ ನೆಲದಲ್ಲಿ ದಸರಾ ಅಚರಣೆಯಾಗುತ್ತಿರುವುದು ವಿಶೇಷವಾಗಿದೆ ಎಂದರು.

ಭಾರತ ದೇಶದ ಬಹುತೇಕ ನಾಡಿನಲ್ಲಿ ದಸರಾ ಹಬ್ಬ ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯ ಉಗಮವಾಗಿದನಿಂದ ದಸರಾ ಹಬ್ಬವು ನಾಡಿನ ಹಬ್ಬವಾಗಿದೆ. ಕೇವಲ ಒಂದು ಜಾತಿ ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮದವರು ಸೇರಿ ಅಚರಿಸುವ ನಾಡಿನ ಹಬ್ಬ ದಸರ ಆಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!