ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮೈದಾನಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ/ಅನುದಾನಿತ/ ಅನುದಾನರಹಿತ ಶಾಲೆಗಳ ಮೈದಾನ ಮತ್ತು ಆವರಣಗಳನ್ನು ಶೈಕ್ಷಣಿಕ ಚಟುವಟಿಕೆ ಅಲ್ಲದೇ ಮತ್ಯಾವುದಕ್ಕೂ ಬಳಸಬಾರದು ಎಂದು ಸೂಚನೆ ನೀಡಲಾಗಿದೆ.ಸದ್ಯ ಇಲಾಖೆಯ ಈ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.
ಅಷ್ಟಾಗಿಯೂ ನಿಯಮಗಳ ಉಲ್ಲಂಘನೆಯಾದರೆ ಶಾಲಾ ಮುಖ್ಯಸ್ಥರು ಹೊಣೆಗಾರರಾಗುತ್ತಾರೆ. ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳ ಆವರಣಗಳಲ್ಲಿ ನಡೆಯುತ್ತಿದ್ದ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ.
ಈ ತುಷ್ಟೀಕರಣ ನೀತಿಗೆ ಸರಿಯಾಗಿ ಠಕ್ಕರ್ ಕೊಡಬೇಕು. ಶಾಲೆಗಳಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳಿಗೆ ಹಿಂದೂಗಳು ಪ್ರಾಯೋಜಕತ್ವ ವಹಿಸಿ ಕೊಳ್ಳಕೂಡದು ಮಾತ್ರವಲ್ಲದೆ ಭಾಗವಹಿಸಲೂ ಬಾರದು.ರಾಷ್ಟ್ರೀಯ ಹಬ್ಬಗಳನ್ನು ಪ್ರತ್ಯೇಕ ವಾಗಿ ಆಚರಿಸುವ ಸಂಪ್ರದಾಯ ಆರಂಭವಾಗಲಿ.ಈ ಪ್ರಕ್ರಿಯೆಯಲ್ಲಿ ಗಾಂಧಿ ನೆಹರೂರಂತಹ ಉತ್ಸವಮೂರ್ತಿಗಳನ್ನು ವರ್ಜಿಸ ಬಹುದು.