ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದ ಎಲ್ಲಾ ದೇಗುಲಗಳಲ್ಲಿ ಭಕ್ತರಿಗೆ ಅರಳಿ ಹೂವು ಪ್ರಸಾದವಾಗಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದರೆ ಈ ಹೂವನ್ನು ಪೂಜೆಗೆ ನಿಷೇಧಿಸಲಾಗಿಲ್ಲ. ಪುಷ್ಪಾಭಿಷೇಕ ಮತ್ತು ನಿರಾಳದಲ್ಲಿ ಇದರ ಬಳಕೆ ಮುಂದುವರಿಯಲಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹೇಳಿದ್ದಾರೆ.
ಯಾಕೆ ಈ ನಿಷೇಧ?
ಅರಳಿ ಹೂವು ಹಲವು ಆರೋಗ್ಯ ಸಮಸ್ಯೆ ಉಂಟುಮಾಡುತ್ತದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಹೂವನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಲಿತಾಂಶ ಬರುವವರೆಗೆ ಭಕ್ತರಿಗೆ ನೀಡುವ ನಿವೇದ್ಯ ಸಮರ್ಪಣೆ ಮತ್ತು ಅರ್ಚನಾ ಪ್ರಸಾದದಲ್ಲಿ ಈ ಹೂವಿನ ಬಳಕೆ ಇಲ್ಲ ಎಂದು ದೇವಸ್ವಂ ಮಂಡಳಿ ಹೇಳಿದೆ. ಮಾಹಿತಿ ನೀಡಿದೆ. ಆರೋಗ್ಯ ಇಲಾಖೆ ಸೂಚನೆ ನೀಡಿದರೆ ಪೂಜೆಯಲ್ಲಿಯೂ ಇದರ ಬಳಕೆಯನ್ನು ನಿಷೇಧಿಸಲಾಗುವುದು ಎಂದೂ ಮಂಡಳಿ ಹೇಳಿದೆ.