ಉತ್ತರ ಪ್ರದೇಶ: ಗಲಭೆ ಮಾಸ್ಟರ್‌ ಮೈಂಡ್‌ ಜಾವೇದ್ ಅಹ್ಮದ್ ನನ್ನು ಸೆರೆಹಿಡಿದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪ್ರವಾದಿ ಮುಹಮ್ಮದ್ ವಿರುದ್ಧ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮುಸ್ಲಿಂರ ದಾಂಧಲೆಗಳು ಒಂದು ಹಂತಕ್ಕೆ ತಣ್ಣಗಾಗುತ್ತಲೇ ಅಖಾಡಕ್ಕೆ ಇಳಿದಿರುವ ಪೊಲೀಸರು ಹಿಂಸಾಕೃತ್ಯದಲ್ಲಿ ತೊಡಗಿದ್ದವರನ್ನು  ಹುಡುಕಿ ಹುಡುಕಿ ಹೆಡೆಮುರಿ ಕಟ್ಟುತ್ತಿದ್ದಾರೆ. ಇದೀಗ ಗಲಭೆಯ ಮಾಸ್ಟರ್ ಮೈಂಡ್ ಜಾವೇದ್ ಅಹ್ಮದ್ ನನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಯಾಗ್‌ರಾಜ್ ಎಸ್‌ಎಸ್‌ಪಿ ಅಜಯ್ ಕುಮಾರ್, “ಈ ಕೃತ್ಯಕ್ಕೆ ಇನ್ನಷ್ಟು ಮಾಸ್ಟರ್‌ಮೈಂಡ್‌ಗಳು ಇರಬಹುದು. ಸಮಾಜವಿರೋಧಿಗಳು ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡು ಪೊಲೀಸರು ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ಕಲ್ಲು ತೂರಿದ್ದಾರೆ. ಗಲಭೆಕೋರರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಿಂಸಾಕೃತ್ಯ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ವಿದ್ಯಾರ್ಥಿಯಾಗಿರುವ ಜಾವೇದ್ ಮಗಳು ಸಹ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಅಗತ್ಯಬಂದರೆ, ದೆಹಲಿ ಪೊಲೀಸರನ್ನು ಸಂಪರ್ಕಿಸಿ ಆಕೆಯನ್ನು ವಶಕ್ಕೆ ಪಡೆಯಲು ತಂಡಗಳನ್ನು ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಶುಕ್ರವಾರದ ಘಟನೆಯನ್ನು ಮತ್ತಷ್ಟು ವಿವರಿಸಿದ ಕುಮಾರ್, ಹಿಂಸಾಚಾರದಲ್ಲಿ ಎಐಎಂಐಎಂ (ಒವೈಸಿ ಪಕ್ಷ)ನ  ಕೆಲವರ ಹೆಸರುಗಳು ಕೇಳಿಬರುತ್ತಿದೆ. ಅದಕ್ಕೆ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ” ಎಂದು ಹೇಳಿದರು.
ಮುಸ್ಲಿಮರ ಶುಕ್ರವಾರದ ಪ್ರಾರ್ಥನೆಯ ನಂತರ ದೆಹಲಿ, ಉತ್ತರ ಪ್ರದೇಶ, ತೆಲಂಗಾಣ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನಾಕಾರರು ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಫಲಕಗಳನ್ನು ಹಿಡಿದಿದ್ದರು. ಪ್ರತಿಭಟನಾಕಾರರು ಪೊಲೀಸರೊಂದಿಗೆ ಹೋರಾಡುತ್ತಿದ್ದಂತೆ ವಿವಿಧ ರಾಜ್ಯಗಳಲ್ಲಿ ಕಲ್ಲು ತೂರಾಟದ ಘಟನೆಗಳು ದಾಖಲಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!