ಹೊಸದಿಗಂತ ಗೋಕರ್ಣ:
ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಇಬ್ಬರು ವಿದೇಶಿ ಪ್ರವಾಸಿಗರನ್ನ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಮಧ್ಯಾಹ್ನ ಕುಡ್ಲೆ ಕಡಲತೀರದಲ್ಲಿ ನಡೆದಿದೆ.
ರಷ್ಯಾದ ಇರೀನಾ(37), ಆನ್ಯ(27) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದು, ಒಟ್ಟು ಮೂವರು ಸ್ನೇಹಿತರು ಜೊತೆಯಾಗಿ ಸಮುದ್ರದಲ್ಲಿ ಈಜಾಡಲು ತೆರಳಿದಾಗ ಇಬ್ಬರು ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ಜೀವಾಪಾಯದಲ್ಲಿದ್ದರು. ಈ ವಾರದಲ್ಲಿ ಇದು ನಾಲ್ಕನೇ ಅವಘಡವಾಗಿದೆ ಎನ್ನಲಾಗಿದೆ.