ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾ ವಿರುದ್ಧ ಭುಗಿಲೆದ್ದ ಪ್ರತಿಭಟನೆ: ಕೈಗೆ ಸಿಗುತ್ತಿಲ್ಲ ಠೇವಣಿಯಿಟ್ಟಿದ್ದ ಹಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದಲ್ಲಿ ಬಹುದೊಡ್ಡ ಬ್ಯಾಂಕ್‌ ಹಗರಣವೊಂದು ಬೆಳಕಿಗೆ ಬಂದಿದ್ದು ಸಾವಿರಾರು ಜನರ ಲಕ್ಷಾಂತರ ಮೌಲ್ಯದ ಠೇವಣಿ ಇಟ್ಟಿದ್ದ ಹಣ ಏಕಾಏಕಿ ಸ್ಥಗಿತಗೊಂಡಿದೆ. ಸರ್ಕಾರಿ ಸ್ವಾಮ್ಯದ ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾದಲ್ಲಿ ಈ ಹಗರಣ ನಡೆದಿದ್ದು ಠೇವಣಿ ಸ್ಥಗಿತ ಗೊಳಿಸಿರುವುದರ ವಿರುದ್ಧ ಸೆಂಟ್ರಲ್ ಹೆನಾನ್ ಪ್ರಾಂತ್ಯದಲ್ಲಿ ಜನಸಾಮಾನ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೋಲೀಸರು ಈ ಹಗರಣದ ಹಿಂದಿರುವ ಕೆಲ ಶಂಕಿತರನ್ನು ಬಂಧಿಸಿದ್ದಾರೆ

ಹೆನಾನ್‌ ನಲ್ಲಿರುವ ನಾಲ್ಕು ಬ್ಯಾಂಕ್‌ ಗಳು ಲಕ್ಷಾಂತರ ಠೇವಣಿಯನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ತಮ್ಮ ಠೇವಣಿ ಇಟ್ಟಿದ್ದ ಹಣವನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಏಪ್ರಿಲ್‌ ನಿಂದಲೇ ಠೇವಣಿ ತಡೆಹಿಡಿಯಲಾಗಿದ್ದು ಮೇ ಹಾಗೂ ಜೂನ್‌ ನಲ್ಲಿಯೂ ಕೂಡ ಇದು ಮುಂದುವರೆದಿದೆ. ಇದರಿಂದ ಹಣವನ್ನು ಪಡೆಯಲಾಗದೇ ರೊಚ್ಚಿಗೆದ್ದ ಗ್ರಾಹಕರು ಭಾನುವಾರ ಝೆಂಗ್‌ಝೌ ನಗರದ ಪೀಪಲ್ಸ್ ಬ್ಯಾಂಕ್ ಆಫ್ ಚೀನಾದ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ನೂರಾರು ಪ್ರತಿಭಟನಾಕಾರರು ಭ್ರಷ್ಟಾಚಾರದ ಆರೋಪದ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದು ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ಅವರನ್ನು ಸುತ್ತುವರೆದು ಕೆಲವರ ಮೇಲೆ ದಬ್ಬಾಳಿಕೆ ಮಾಡಿ ಥಳಿಸುತ್ತಿರುವ ವೀಡಿಯೋಗಳು ಅಂತರ್ಜಾಲ ಮಾಧ್ಯಮಗಳಲ್ಲಿ ಹರಿದಾಡಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಚಾಟ್‌ನಲ್ಲಿ ಪೋಸ್ಟ್ ಮಾಡಲಾದ ವರದಿಯೊಂದರ ಪ್ರಕಾರ ಶಂಕಿತರು ಗುಂಪು ಕಂಪನಿಯ ಮೂಲಕ ಹಲವಾರು ಬ್ಯಾಂಕ್‌ಗಳನ್ನು ನಿಯಂತ್ರಿಸುತ್ತಿದ್ದರು ಮತ್ತು ಠೇವಣಿಗಳನ್ನು ಸಂಗ್ರಹಿಸಲು ಮತ್ತು ಹಣಕಾಸು ಉತ್ಪನ್ನಗಳನ್ನು ಮಾರಾಟ ಮಾಡಲು ಮೂರನೇ ವ್ಯಕ್ತಿಯ ಹಣಕಾಸು ಉತ್ಪನ್ನ ವೇದಿಕೆಗಳನ್ನು ಮತ್ತು ಅವರ ಸ್ವಂತ ಸಂಸ್ಥೆಯನ್ನು ಬಳಸುತ್ತಿದ್ದರು ಎಂದು ಹೆನಾನ್‌ ಪೋಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!