ಕುತುಬ್‌ ಮಿನಾರ್‌ ಮರುನಾಮಕರಣಕ್ಕಾಗಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿರುವ ಪ್ರಸಿದ್ಧ ಕುತುಬ್‌ ಮಿನಾರ್‌ ಅನ್ನು ವಿಷ್ಣು ಸ್ಥಂಭವೆಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿರುವ ಕುತುಬ್‌ ಮಿನಾರ್‌ ಎದುರಲ್ಲಿ ಮಹಾಕಾಲ್ ಮಾನವ್ ಸೇವಾ ಮತ್ತು ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅದನ್ನು ವಿಷ್ಣು ಸ್ಥಂಬವೆಂದು ಮರುನಾಮಕರಣಗೊಳಿಸುವಂತೆ ಫಲಕಗಳನ್ನು ಪ್ರದರ್ಶಿಸಿದ್ದಾರೆ. ಜೊತೆಗೆ ಜೋರಾಗಿ ಹನುಮಾನ್‌ ಚಾಲೀಸಾ ಪಠಿಸಿ ಪೋಲೀಸರ ಬಂದೋಬಸ್ತ್‌ ನಡುವಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಇದರ ಜೊತೆಯಲ್ಲೇ ದೆಹಲಿ ಬಿಜೆಪಿಯು ರಾಷ್ಟ್ರ ರಾಜಧಾನಿ ದೆಹಲಿಯ ಇತರ ಹೆಗ್ಗುರುತುಗಳಾದ ಅಕ್ಬರ್ ರಸ್ತೆ, ಹುಮಾಯೂನ್ ರಸ್ತೆ, ಔರಂಗಜೇಬ್ ಲೇನ್ ಮತ್ತು ತುಘಲಕ್ ಲೇನ್‌ಗಳ ಹೆಸರುಗಳನ್ನು ಬದಲಾವಣೆ ಮಾಡುವಂತೆ ಹೇಳಿದೆ.

ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಧ್ಯಕ್ಷರಿಗೆ ಪತ್ರ ಬರೆದು ಮೊಘಲ್‌ ಹೆಸರುಗಳನ್ನು ಬದಲಾಯಿಸಿ ಮಹಾರಾಣಾ ಪ್ರತಾಪ್, ಗುರು ಗೋವಿಂದ್ ಸಿಂಗ್, ಮಹರ್ಷಿ ವಾಲ್ಮೀಕಿ ಮತ್ತು ಜನರಲ್ ಬಿಪಿನ್ ರಾವತ್ ಅವರ ಹೆಸರನ್ನು ಮರುನಾಮಕರಣ ಮಾಡುವಂತೆ ಆಗ್ರಹಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!