ಬಾಂಗ್ಲಾ ನೆಮ್ಮದಿಗೆ ಬೆಂಕಿ ಹಚ್ಚಿದ ‘ಇಂಧನ’: ಸರ್ಕಾರದ ನಿಲುವು ಖಂಡಿಸಿ ದಂಗೆಯೆದ್ದ ಜನತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶ ಇಂಧನ ಬೆಲೆಯನ್ನು ಶೇ 51.7 ಹೆಚ್ಚಿಸಿದ ಬೆನ್ನಲ್ಲೇ ಹಲವಡೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದೆ.
ಸರ್ಕಾರದ ನಿಲುವು ವಿರೋಧಿಸಿ ಜನರು ರಸ್ತೆಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದು, ಹಲವೆಡೆ ಹಿಂಸಾಚಾರ ನಡೆದಿದೆ. ಪೊಲೀಸರ ಬಿಗಿ ಬಂದೋಬಸ್ತ್ ನಡುವೆಯೂ ಸಾರ್ವಜನಿಕರು ದಂಗೆ ಎದ್ದಿದ್ದಾರೆ. ಈಗಾಗಲೇ ಅಧಿಕ ಹಣದುಬ್ಬರ ಎದುರಿಸುತ್ತಿರುವ ದೇಶದ ಜನರಿಗೆ ಇಂಧನ ಬೆಲೆ ಏರಿಕೆ ಮತ್ತಷ್ಟು ಹೊರೆಯಾಗಿದೆ.

ನವೀಕರಿಸಿದ ಬೆಲೆಗಳು ಎಲ್ಲರಿಗೂ ಸಹಿಸಲು ಸಾಧ್ಯವಿಲ್ಲ. ಆದರೆ ನಮಗೆ ಬೇರೆ ಆಯ್ಕೆ ಇರಲಿಲ್ಲ. ಜನರು ತಾಳ್ಮೆಯಿಂದಿರಬೇಕು ಎಂದು ವಿದ್ಯುತ್, ಇಂಧನ ಮತ್ತು ಖನಿಜ ಸಂಪನ್ಮೂಲಗಳ ರಾಜ್ಯ ಸಚಿವ ನಸ್ರುಲ್ ಹಮೀದ್ ಸುದ್ದಿಗಾರರಿಗೆ ತಿಳಿಸಿದರು. ಜಗತಿಕ ಬೆಲೆಗಳು ಕುಸಿದರೆ ಬೆಲೆಗಳನ್ನು ಸರಿಹೊಂದಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ನಡುವೆ ಬಾಂಗ್ಲಾದೇಶ ಮತ್ತು ಚೀನಾ ನಡುವೆ ವಿಪತ್ತು ನಿರ್ವಹಣೆ ಮತ್ತು ಸಾಂಸ್ಕೃತಿಕ ಸಹಕಾರ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಚೀನಾದ ವಿದೇಶಾಂಗ ಸಚಿವರು ಬಾಂಗ್ಲಾದೇಶಕ್ಕೆ ಆಗಮಿಸಿದ್ದು, ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!