ಹೊಸದಿಗಂತ ಡಿಜಿಟಲ್ ಡೆಸ್ಕ್;
ಹವಾಮಾನ ಹೋರಾಟಗಾರ ವಾಂಗ್ಚುಕ್ ಹಾಗೂ ಇನ್ನಿತರ ಪ್ರತಿಭಟನಾ ನಿರತರನ್ನು ದೆಹಲಿ ಪೊಲೀಸರು ಲಡಾಖ್ ಭವನದಲ್ಲಿ ವಶಕ್ಕೆ ಪಡೆದಿದ್ದಾರೆ.
ಲಡಾಖ್ ಭವನದ ಬಳಿ 20-25 ಮಂದಿ ಪ್ರತಿಭಟನಾ ನಿರತರು ವಾಂಗ್ಚುಕ್ ಜೊತೆ ನಿರಶನ ಕೈಗೊಂಡಿದ್ದರು. ಅವರನ್ನು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆಲವು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿಲ್ಲ, ಶಾಂತಿಯುತವಾಗಿ ಕುಳಿತಿದ್ದೇವೆ ಎಂದು ವಾದಿಸಿದರು. ಪ್ರತಿಭಟನಾಕಾರರು ಲಡಾಖ್ ಭವನದ ಹೊರಗೆ ಕುಳಿತುಕೊಳ್ಳಲು ಯಾವುದೇ ಅನುಮತಿ ಹೊಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.