ಮುಂಗಾರು ಅಧಿವೇಶನದಲ್ಲಿ ಗದ್ದಲ: ಇಲ್ಲಿಯವರೆಗೆ ಆಗಿದ್ದೇನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮುಂಗಾರು ಅಧಿವೇಶನದ 3ನೇದಿನವೂ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರೆದಿದೆ. ಈ ಮಾನ್ಸೂನ್ ಅಧಿವೇಶನದಲ್ಲಿ, ಕಂಟೋನ್ಮೆಂಟ್ ಮಸೂದೆ ಮತ್ತು ಬಹು-ರಾಜ್ಯ ಸಹಕಾರಿ ಸಂಘಗಳ ಮಸೂದೆ ಸೇರಿದಂತೆ 32 ಮಸೂದೆಗಳನ್ನು ಕೇಂದ್ರವು ಘೋಷಿಸುವ ಸಾಧ್ಯತೆಯಿದೆ. ಈ ಪೈಕಿ 8 ಮಸೂದೆಗಳು ಉಭಯ ಸದನಗಳ ಮುಂದೆ ಬಾಕಿ ಉಳಿದಿವೆ. ಈ ನಡುವೆ ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ಸ್ಪೀಕರ್‌ ಓಂ ಪ್ರಕಾಶ್‌ ಬಿರ್ಲಾ ಅವರು ಸದನವನ್ನು ಮದ್ಯಾಹ್ನ 2 ಗಂಟೆಯವರೆಗೆ ಮುಂದೂಡಿದ್ದಾರೆ. ಈ ಕುರಿತು ಇಲ್ಲಿಯವೆರೆಗೆ ಏನೆಲ್ಲಾ ಆಗಿದೆ ಎಂಬುದರ ಕುರಿತಾದ ಚಿಕ್ಕ ವಿವರಣೆ ಇಲ್ಲಿದೆ.

  • ಸಂಸತ್ತಿನ ಎರಡನೇ ದಿನದ ಅಧಿವೇಶನವು ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಕೊನೆಯಾಗಿದ್ದು, ಲೋಕಸಭೆಯಲ್ಲಿ ಭಾರತೀಯ ಅಂಟಾರ್ಟಿಕಾ ಕಾಯಿದೆ 2022 ಅನ್ನು ಪ್ರಸ್ತಾಪಿಸಲಾಗಿದೆ, ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ವಿರೋಧದ ನಡುವೆಯೂ ‘ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳು (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ಮಸೂದೆಯನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಮಂಡಿಸಿದ್ದಾರೆ.
  • ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಡಿಎಂಕೆ ಸದಸ್ಯರು ಲೋಕಸಭೆಯ ಬಾವಿಯಲ್ಲಿ ಫಲಕಗಳನ್ನು ಹಿಡಿದು ಪ್ರತಿಭಟಿಸಿದರು. ಅಲ್ಲದೆ, ಸರಕುಗಳ ಬೆಲೆ ಏರಿಕೆ ಮತ್ತು ಎಲ್‌ಪಿಜಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
  • ನೆರೆಯ ದೇಶವಾದ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಲ್ಲಿ ಭಾರತ ಮಧ್ಯ ಪ್ರವೇಶಿಸಬೇಕು ಎಂದು ಡಿಎಂಕೆ ಮತ್ತು ಎಐಎಡಿಎಂಕೆ ಒತ್ತಾಯಿಸಿದೆ.
  • ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ನಿತ್ಯಾನಂದ ರೈ ಅವರು “ಕಳೆದ ಮೂರು ವರ್ಷಗಳಲ್ಲಿ 3.92 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಮತ್ತು ಅವರಲ್ಲಿ 1.70 ಲಕ್ಷ ಜನರು ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ, ವಿದೇಶಾಂಗ ಸಚಿವಾಲಯ ನೀಡಿರುವ ವಿವರಗಳ ಪ್ರಕಾರ ವ್ಯಕ್ತಿಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಮತ್ತು 120 ಕ್ಕೂ ಹೆಚ್ಚು ದೇಶಗಳಲ್ಲಿ ಪೌರತ್ವ ಪಡೆದಿದ್ದಾರೆ. 2019, 2020 ಮತ್ತು 2021 ರಲ್ಲಿ ಒಟ್ಟು 3,92,643 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ” ಎಂದು ಲೋಕ ಸಭೆಗೆ ತಿಳಿಸಿದ್ದಾರೆ.
  • ರಾಷ್ಟ್ರೀಯ ಔಷಧ ಅವಲಂಬನೆ ಚಿಕಿತ್ಸಾ ಕೇಂದ್ರದ (ಎನ್‌ಡಿಡಿಟಿಸಿ) ವರದಿಯ ಪ್ರಕಾರ, 10-17 ವರ್ಷ ವಯಸ್ಸಿನ 62 ಲಕ್ಷ ಜನರು ಗಾಂಜಾ, ಒಪಿಯಾಡ್‌ಗಳು ಮತ್ತು ಕೊಕೇನ್‌ನ ಬಳಕೆದಾರರಿದ್ದಾರೆ ಮತ್ತು 18 ರ ನಡುವಿನ ವಯಸ್ಸಿನ 4.8 ಕೋಟಿ ಜನರಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಸಂಸತ್ತಿಗೆ ತಿಳಿಸಿದೆ.
  • 2019 ರಿಂದ ಕಳೆದ ತಿಂಗಳವರೆಗೆ ದೇಶದಲ್ಲಿ 36.29 ಲಕ್ಷ ಸೈಬರ್ ಭದ್ರತಾ ಘಟನೆಗಳು ವರದಿಯಾಗಿವೆ. ಅಂತಹ ವಿನ್ಯಾಸಗಳನ್ನು ಪರಿಶೀಲಿಸಲು ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಮಂಗಳವಾರ ಹೇಳಿದ್ದಾರೆ.
  • ಬುಧವಾರ ಸಂಸತ್ತಿನ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಕುರಿತು ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಅವರು ಮುಂದೂಡಿಕೆ ನಿರ್ಣಯ ಮಂಡಿಸಿದ್ದಾರೆ.
  • ಮೂರನೇ ದಿನವೂ ಪ್ರತಿಭಟನೆ ಮುಂದುವರೆಸಿದ ಪ್ರತಿಪಕ್ಷಗಳು ಸಂಸತ್ತಿನ ಗಾಂಧಿ ಪ್ರತಿಮೆಯ ಎದುರಿನಲ್ಲಿ ಬೆಲೆಏರಿಕೆ ಕುರಿತು ಜಂಟಿ ಪ್ರತಿಭಟನೆ ನಡೆಸಿವೆ, ಕಾಂಗ್ರೆಸ್‌ ಮುಖಂಡರಾದ ಮಲ್ಲಿಕಾರ್ಜುನ್‌ ಖರ್ಗೆ, ಅದೀರ್‌ ರಂಜನ್‌ ಚೌಧರಿ ಸೇರಿದಂತೆ ಹಲವು ಸಂಸದರು ಪಾಲ್ಗೊಂಡಿದ್ದಾರೆ.
  • ಜಿಎಸ್‌ಟಿ ಹೆಚ್ಚಳ, ಹಣದುಬ್ಬರ ಮತ್ತು ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ವಿರುದ್ಧ ಪ್ರತಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆಯ ಕಲಾಪ ಗದ್ದಲಕ್ಕೆ ತಿರುಗಿತು, ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಓಂ ಪ್ರಕಾಶ್‌ ಬಿರ್ಲಾ ಅವರು ಸದನವನ್ನು ಮದ್ಯಾಹ್ನ 2 ಗಂಟೆಯವರೆಗೆ ಸದನವನ್ನು ಮುಂದೂಡಿದ್ದಾರೆ. ರಾಜ್ಯ ಸಬೆಯನ್ನೂ ಕೂಡ ಇದೇ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!