ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸಕ್ರಿಯಾ ಸದಾಸ್ಯತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು.
ಪಕ್ಷದ ಕಾರ್ಯಕರ್ತನಾಗಿ, ನಾನು ಮೊದಲ ಸಕ್ರಿಯ ಸದಸ್ಯ ಆಗಲು ಹೆಮ್ಮೆಪಡುತ್ತೇನೆ. ಇದು ತಳಮಟ್ಟದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸುವ ಮತ್ತು ರಾಷ್ಟ್ರೀಯ ಪ್ರಗತಿಗೆ ಪಕ್ಷದ ಕಾರ್ಯಕರ್ತರ ಪರಿಣಾಮಕಾರಿ ಕೊಡುಗೆಯನ್ನು ಖಚಿತಪಡಿಸುವ ಆಂದೋಲನವಾಗಿದೆ ಎಂದು ಮೋದಿ ಹೇಳಿದ್ದಾರೆ.
ಸಕ್ರಿಯ ಸದಸ್ಯರಾಗಲು, ಒಬ್ಬ ಕಾರ್ಯಕರ್ತ ಒಂದೇ ಬೂತ್‌ನಲ್ಲಿ ಅಥವಾ ವಿಧಾನಸಭಾ ಸ್ಥಾನದಲ್ಲಿ 50 ಸದಸ್ಯರನ್ನು ನೋಂದಾಯಿಸಿಕೊಳ್ಳಬೇಕು. ಅಂತಹ ಕಾರ್ಯಕರ್ತರು ಮಂಡಲ ಸಮಿತಿ ಮತ್ತು ಅದಕ್ಕಿಂತ ಹೆಚ್ಚಿನ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಅದೇ ಸಮಯದಲ್ಲಿ, ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಅವರಿಗೆ ಹಲವಾರು ಅವಕಾಶಗಳು ಸಿಗುತ್ತವೆ ಎಂದು ಮೋದಿ ಹೇಳಿದ್ದಾರೆ.