ಬಾರಾವಾಫತ್ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ: ಇಬ್ಬರು ಅಪ್ರಾಪ್ತರು ಸಹಿತ 7 ಮಂದಿ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಅಮೇಥಿಯಲ್ಲಿ ಬಾರಾವಾಫತ್ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ 7 ಜನರನ್ನು ಬಂಧಿಸಿದ್ದಾರೆ.

ಒಂಬತ್ತು ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಅಮೇಥಿಯಲ್ಲಿರುವ ಮೊಹಮ್ಮದ್ ಜಯಸಿ ಅವರ ದೇಗುಲದಲ್ಲಿ ಪ್ರತಿ ವರ್ಷ ರಬಿಯುಲ್ ಅವ್ವಲ್ ಅನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ವರ್ಷವೂ ನೂರಾರು ಮಂದಿ ಸೇರಿ ಮೆರವಣಿಗೆ ಮೂಲಕ ಹಬ್ಬ ಆಚರಿಸಿದರು.

ಈ ಮೆರವಣಿಗೆಯಲ್ಲಿ ಹತ್ತಾರು ಯುವಕರು ಮತ್ತು ಬಾಲಕರು ಆಕ್ಷೇಪಾರ್ಹ ಘೋಷಣೆಯನ್ನು (ಸಾರ್ ತಾನ್ ಸೆ ಜುದಾ) ಕೂಗಿದರು.
ಪೊಲೀಸರು 10-15 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಒಂಬತ್ತು ಮಂದಿಯನ್ನು ಹೆಸರಿಸಿದ್ದಾರೆ. ಡಿಐಜಿ ಅಮರೇಂದ್ರ ಕುಮಾರ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!