ಪಿಎಸ್ಐ ನೇಮಕಾತಿ ಅಕ್ರಮ: ಸೆರೆಮನೆ ಸೇರಿದ ಆರೋಪಿ ದಿವ್ಯಾ ಹಾಗರಗಿ

ಹೊಸ ದಿಗಂತ ವರದಿ, ಕಲಬುರಗಿ:

ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಸೋಮವಾರ ಸಂಜೆ ಹೊತ್ತಿಗೆ ಸೆರೆಮನೆಗೆ ಸೇರಿಸಲಾಗಿದೆ. 11 ದಿನಗಳ ಕಾಲ ಸಿಐಡಿ ವಶದಲ್ಲಿದ್ದು, ವಶದ ದಿನಗಳ ಮುಕ್ತಾಯವಾಗುತ್ತಿದ್ದಂತೆ, ಇಂದು ಕಲಬುರಗಿ ಸೆಂಟ್ರಲ್ ಜೈಲ್,ಗೆ ದಿವ್ಯಾಳ,ನ್ನು ರವಾನೆ ಮಾಡಲಾಯಿತು.
ಕಲಬುರಗಿ ಮೂರನೇ ಜೆಎಮ್ಎಫ್ಸಿ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ 11 ದಿನಗಳ ಕಾಲ ಸಿಐಡಿ ಹಿರಾಸತ್ತಿಗೆ ನೀಡಿತ್ತು, ಆ ಅವಧಿ ಪೂರ್ಣ ಗೊಂಡ ಬಳಿಕ ಇಂದು ಸೋಮವಾರ ಆಕೇಯನ್ನು ಸೆರೆಮನೆಗೆ ಒಡ್ಡಲಾಯಿತು.
ಪ್ರಕರಣ ಬೆಳಕಿಗೆ ಬರುತ್ತಿದಂತೆ ದಿವ್ಯ ಪರಾರಿಯಾಗಿದ್ದಳು,ನಂತರ ಸಿಐಡಿ ತಂಡವು ಪುಣೆಯ ಉದ್ಯಮಿ ಮನೆಯಲ್ಲಿ ಅವಳನ್ನು ಅರೆಸ್ಟ್ ಮಾಡಿ ತರಲಾಗಿತ್ತು. ಈ ನಡುವೆ 18 ದಿನಗಳ ಕಾಲ ಸಿಐಡಿ, ಗೆ ದಿವ್ಯಾ ಚಳ್ಳೆ ಹಣ್ಣು ತಿನಿಸಿದ್ದಳು.
ಇದೀಗ ವಿಚಾರಣೆ ಮುಗಿದ ನಂತರ ಆತನ ಗಂಡವಿರುವ ಕಲಬುರಗಿ ಸೆಂಟ್ರಲ್ ಜೈಲಿಗೆ, ಹೆಂಡತಿಯನ್ನು ಸಹ ಸಾಗಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!