ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿಯಿಂದ ಮತ್ತೆ ಚಾಜ್೯ಶೀಟ್ ಸಲ್ಲಿಕೆ

ಹೊಸದಿಗಂತ ವರದಿ, ಕಲಬುರಗಿ:

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡದಿಂದ ನಗರದ ಮೂರು ಪೋಲಿಸ್ ಠಾಣೆಯಲ್ಲಿ ದಾಖಲಾದ ಆರು ಪ್ರತ್ಯೇಕ ಚಾಜ್೯ ಶೀಟ್,ನ್ನು ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಕಲಬುರಗಿ ನಗರದ ವಿವಿಧ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ದೂರುಗಳ ಸಂಬಂಧ ಚಾಜ್೯ ಶೀಟ್ ಸಲ್ಲಿಕೆ ಮಾಡಲಾಗಿದೆ.

ನಗರದ ವಿಶ್ವವಿದ್ಯಾಲಯದ ಪೋಲಿಸ್ ಠಾಣೆ, ಸ್ಟೇಷನ್ ಬಜಾರ್ ಪೋಲಿಸ್ ಠಾಣೆ ಹಾಗೂ ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾದ ಕೆಸ್ ಸಂಬಂಧ ಪಟ್ಟ ಹಾಗೇ ಚಾಜ್೯ ಶೀಟ್ ಸಲ್ಲಿಕೆಯಾಗಿದೆ.

ಅಶೋಕ ನಗರ ಪೋಲಿಸ್ ಠಾಣೆ ಕ್ರೈಂ ನಂಬರ 96/22 ಸಂಬಂಧ 788 ಪುಟಗಳ ಚಾಜ್೯ ಶೀಟ್ ಸಲ್ಲಿಕೆಯಾಗಿದೆ.ಅದರಂತೆ ನಗರದ ವಿಶ್ವವಿದ್ಯಾಲಯದ ಪೋಲಿಸ್ ಠಾಣೆ ಕ್ರೈಂ ನಂಬರ 182/22 ಸಂಬಂಧ 626 ಪುಟಗಳ ಚಾಜ್೯ ಶೀಟ್ ಸಲ್ಲಿಕೆಯಾಗಿದೆ.

ಅಶೋಕ ನಗರ ಪೋಲಿಸ್ ಠಾಣೆ ಕ್ರೈಂ ನಂಬರ 97/22 1318 ಪುಟಗಳ ಚಾಜ್೯ ಶೀಟ್ ಸಲ್ಲಿಕೆಯಾಗಿದೆ.ಅಶೋಕ ನಗರ ಪೋಲಿಸ್ ಠಾಣೆ ಕ್ರೈಂ ನಂಬರ 98/22ರ ಕೆಸ್ ಸಂಬಂಧ 1048 ಪುಟಗಳ ಚಾಜ೯ ಶೀಟ್ ಸಲ್ಲಿಕೆಯಾಗಿದೆ.

ಅಶೋಕ ನಗರ ಪೋಲಿಸ್ ಠಾಣೆ ಕ್ರೈಂ ನಂಬರ 99/22 ಸಂಬಂಧ 788 ಪುಟಗಳ ಚಾಜ್೯ ಶೀಟ್ ಸಲ್ಲಿಕೆಯಾಗಿದ್ದು, ಸ್ಟೇಶನ್ ಬಜಾರ್ ಪೋಲಿಸ್ ಠಾಣೆ ಕ್ರೈಂ ನಂಬರ 57/22 ಸಂಬಂಧ 888 ಪುಟಗಳ ಚಾಜ್೯ ಶೀಟ್,ನ್ನು ಕಲಬುರಗಿ ನಗರದ ಮೂರನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸೋಮವಾರ ಚಾಜ್೯ ಶೀಟ್ ಸಲ್ಲಿಸಲಾಗಿದ್ದು,ಪಿಎಸ್ಐ ಪ್ರಕರಣದಲ್ಲಿ ತಲೆ ಮರೆಸಿಕೊಂಡ ಉಳಿದ ಆರೋಪಿಗಳಿಗಾಗಿ ಸಿಐಡಿ ಯಿಂದ ಶೋಧ ಕಾರ್ಯ ಮುಂದುವರಿದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!